ಮುಂಬೈ: ಮಹಾರಾಷ್ಟ್ರ (Maharashtra) ರಾಜ್ಯದ ಸಾಂಗ್ಲಿ (Sangli) ಜಿಲ್ಲೆಯ ರಸಗೊಬ್ಬರ ಘಟಕವೊಂದರಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ.
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (MIDC) ತಾರಾಪುರ ಬಳಿಯ ಕಾರ್ಖಾನೆಯಲ್ಲಿ ಗುರುವಾರ (ನ.21) ರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಘಟಕದ ಕಾವಲುಗಾರ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಘಟಕದ ಮಾಲೀಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದಕ್ಕೂ ಓದಿ: ಬೆಂಗಳೂರು| ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಾಯಿ – ತಾನೂ ಆತ್ಮಹತ್ಯೆಗೆ ಯತ್ನ
ಸದ್ಯ ಗಾಯಗೊಂಡ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ತಾಂತ್ರಿಕ ದೋಷದಿಂದ ರಿಯಾಕ್ಟರ್ ಸ್ಫೋಟಗೊಂಡಿದೆ ಎಂದು ಶಂಕಿಸಿದ್ದು, ಸದ್ಯ ತನಿಖೆ ನಡೆಸುತ್ತಿದ್ದಾರೆ.
ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಥಾಣೆ ಜಿಲ್ಲೆಯ ಅಂಬರ್‌ನಾಥ್‌ನಲ್ಲಿರುವ ರಾಸಾಯನಿಕ ಕಂಪನಿಯಲ್ಲಿ ಅನಿಲ ಸೋರಿಕೆಯಾಗಿತ್ತು. ಅದಕ್ಕೂ ಮುನ್ನ ಮೇ ತಿಂಗಳಲ್ಲಿ ಥಾಣೆ ಜಿಲ್ಲೆಯ ಡೊಂಬಿವಿಲಿಯ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದಾಗಿ 13 ಜನರು ಸಾವನ್ನಪ್ಪಿದರು. ಬಳಿಕ ಜೂನ್‌ನಲ್ಲಿ ಅದರ ಆವರಣದಲ್ಲಿರುವ ಮತ್ತೊಂದು ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.ಇದಕ್ಕೂ ಓದಿ: ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್ ಔಟ್