ಬಳ್ಳಾರಿ: ಸಂಡೂರು ರಾಜ ಮನೆತನದ ಕೊನೆಯ ಮಹಾರಾಣಿ ವಸುಂಧರ ಘೋರ್ಪಡೆ ವಿಧಿವಶರಾಗಿದ್ದಾರೆ.
ಮಾಜಿ ಸಚಿವ ಎಂ ವೈ ಘೋರ್ಪಡೆಯವರ ಪತ್ನಿಯಾಗಿದ್ದ ವಸುಂಧರ ಘೋರ್ಪಡೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
Advertisement
ತ್ರೀವ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಬರೋಡ ರಾಜ ಮನೆತನದ ಇವರು 1953 ರಲ್ಲಿ ಸಂಡೂರಿನ ರಾಣಿಯಾಗಿದ್ದರು. ಮಾಜಿ ಸಚಿವ ದಿವಂಗತ ಎಂ.ವೈ. ಘೋರ್ಪಡೆ ಅವರನ್ನು ವಿವಾಹವಾಗಿದ್ದರು.
Advertisement
ವಸುಂಧರ ಘೋರ್ಪಡೆಯವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಅವರ ಸಂಬಂಧಿ ವೆಂಕಟರಾವ್ ಘೋರ್ಪಡೆ ತಿಳಿಸಿದ್ದಾರೆ.
Advertisement
Advertisement