ರಮೇಶ್ ಅರವಿಂದ್ (Ramesh Arvind) ಅವರ 103 ನೇ ಚಿತ್ರ ಶಿವಾಜಿ ಸುರತ್ಕಲ್ (Shivaji Suratkal) – ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಅದರ ಓಟ ಭರ್ಜರಿಯಾಗಿ ಸಾಗುತ್ತಿದೆ. ಇನ್ನಷ್ಟು ಸಿಂಗಲ್ ಸ್ಕ್ರೀನ್ ಗಳು ಚಿತ್ರದ ಪ್ರದರ್ಶನಕ್ಕೆ ಸೇರ್ಪಡೆಯಾಗಿದೆ. ಚಿತ್ರದ ವಿತರಕರಾದ ಕೆ ಆರ್ ಜಿ ಸ್ಟೂಡಿಯೋಸ್ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು ವಿಶೇಷ.
Advertisement
ಚಿತ್ರದ ಈ ಯಶಸ್ಸಿನ ನಡುವೆ ನಿರ್ದೇಶಕರಾದ ಆಕಾಶ್ ಶ್ರೀವತ್ಸ (Akash Srivaths) ಹಾಗೂ ನಿರ್ಮಾಪಕರಾದ ಅನೂಪ್ ಗೌಡ ಮೈಸೂರಿನ ಮಹಾರಾಜರಾದ ಯದುವೀರ್ ಒಡೆಯರ್ (Yaduvir Wodeyar) ಅವರನ್ನು ಭೇಟಿ ಮಾಡಿದ್ದಾರೆ. ಮಹಾರಾಜರು ಚಿತ್ರದ ಯಶಸ್ಸನ್ನು ಬಹಳ ಮೆಚ್ಚಿ, ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಜೊತೆಗೆ ರಮೇಶ್ ಅರವಿಂದ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ
Advertisement
Advertisement
ಯದುವೀರರ ಬೆಂಬಲ ಇದು ಚಿತ್ರ ತಂಡಕ್ಕೆ, ತಮ್ಮ ಯಶಸ್ಸಿಗೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದಿದೆ ಚಿತ್ರತಂಡ. ಚುನಾವಣೆಯ ಹಾಗೂ ಐ ಪಿ ಎಲ್ ನ ಭರದಲ್ಲಿ ಚಿತ್ರಕ್ಕೆ ಈ ಮಟ್ಟದ ಯಶಸ್ಸು ಸಿಕ್ಕಿರುವುದು ಗಮನಾರ್ಹ. ರಮೇಶ್ ಅರವಿಂದ್ ಜೊತೆಗೆ ಮೇಘನಾ ಗಾಂವ್ಕರ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದು, ಅನೂಪ್ ಗೌಡ ಮತ್ತು ಆಕಾಶ್ ಶ್ರೀವತ್ಸ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಿದೆ.
Advertisement
ಶಿವಾಜಿ ಸುರತ್ಕಲ್ ಮೊದಲ ಭಾಗ ಕೂಡ ಯಶಸ್ಸಿ ಪ್ರದರ್ಶನದ ಜೊತೆಗೆ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅದರ ಬೆನ್ನಲ್ಲೇ ಶಿವಾಜಿ ಸುರತ್ಕಲ್ ಪಾರ್ಟ್ ಮಾಡಲು ನಿರ್ದೇಶಕರು ಸಿದ್ಧತೆ ಮಾಡಿಕೊಂಡಿದ್ದರು. ಎರಡನೇ ಭಾಗ ಕೂಡ ಯಶಸ್ಸು ಕಂಡಿದೆ. ಹಾಗಾಗಿ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತು ಕುತೂಹಲ ಮೂಡಿದೆ.