ಮೈಸೂರು: ದಸರಾ ಪ್ರಮುಖ ಆಕರ್ಷಣೆಯಾದ ಖಾಸಗಿ ದರ್ಬಾರ್ ಅದ್ದೂರಿಯಾಗಿ ನಡೆದಿದೆ. ಗತಕಾಲದ ರಾಜರ ಆಡಳಿತವನ್ನು ಮತ್ತೆ ನೆನಪಿಸಿದ್ದು, ಇಂದು ಯದುವೀರ್ ಮಹರಾಜರ ಖಾಸಗಿ ದರ್ಬಾರ್ ನಡೆಸಿದರು.
ಅರಮನೆಯ ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಸಕಲ ವಿಧಿ ವಿಧಾನದಲ್ಲಿ ಖಾಸಗಿ ದರ್ಬಾರ್ ನಡೆಯಿತು. ಒಡೆಯರ್ ಮನೆತನದ ರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ದರ್ಬಾರ್ ನಡೆಸಿದರು.
Advertisement
Advertisement
ಖಾಸಗಿ ದರ್ಬಾರ್‌ಗೂಮೊದಲು ಅನೇಕ ವಿಧಿವಿಧಾನಗಳು ನಡೆಯಿತು. ಒಡೆಯರ್ ಚಾಮುಂಡಿ ತೊಟ್ಟಿಯಲ್ಲಿ ಗಣಪತಿ ಪೂಜೆ ಮಾಡಿದ ಬಳಿಕ ಕಲಶಪೂಜೆ, ಕಂಕಣಪೂಜೆ ನಡೆಸಿದರು. ಶಿವಸನ್ನಿಧಿ, ಕೃಷ್ಟಸನ್ನಿಧಿ, ಚಾಮುಂಡಿಸನ್ನಿಧಿ ಮುಂತಾದ ದೇವ ದೇವತೆಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಿ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯಿತು. ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳೆಲ್ಲ ನಡೆಯಿತು.
Advertisement
ಪ್ರಮುಖವಾಗಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳನ್ನು ಅಲಂಕಾರ ಮಾಡಿ ಅರಮನೆ ಅವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಪ್ರಾರಂಭವಾಯಿತು.
Advertisement
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಲಶಗಳಿಗೆ ಬೆಳ್ಳಿ ಖುರ್ಚಿಯ ಮೇಲೆ ಕುಳಿತು ಪೂಜೆ ನೆರವೇರಿಸಿದರು. ಈ ವೇಳೆ ವಿದ್ವಾಂಸರಿಂದ ವೇದ-ಘೋಷಗಳು ಮೊಳಗಿದವು. ಖಾಸಗಿ ದರ್ಬಾರ್ ಅನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ವಿಕ್ಷಣೆ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv