ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ನಾಯಕನಾಗಿ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾರನ್ನು (Raanna) ಪರಿಚಯಿಸಿದ್ದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಈಗ ನಾಯಕಿಯನ್ನು ಘೋಷಣೆ ಮಾಡಿದ್ದಾರೆ. ‘ಕಾಟೇರ’ (Kaatera) ಯಶಸ್ಸಿನ ಬಳಿಕ ತರುಣ್ ಅವರು ಅಟ್ಲಾಂಟಾ ನಾಗೇಂದ್ರ ಎಂಬುವವರ ಜೊತೆಗೂಡಿ ನಿರ್ಮಿಸುತ್ತಿರುವ ಹೊಸ ಕಥೆಗೆ ಹೊಸ ನಾಯಕಿಯನ್ನು ಕರೆ ತಂದಿದ್ದಾರೆ.


View this post on Instagram
ತರುಣ್ ಸುಧೀರ್ ಹೊಸ ನಾಯಕಿರಯನ್ನು ಪರಿಚಯಿಸುವುದರಲ್ಲಿ ನಿಸ್ಸಿಮರು. ‘ರಾಬರ್ಟ್’ ಮೂಲಕ ಆಶಾ ಭಟ್, ಕಾಟೇರ ಮೂಲಕ ಮಾಲಾಶ್ರೀ ಪುತ್ರಿ ಆರಾಧನ ರಾಮ್ ರನ್ನು ಹೀರೋಯಿನ್ ಆಗಿ ಕನ್ನಡ ಸಿನಿಮಾ ಪ್ರೇಮಿಗಳ ಎದುರು ತಂದಿದ್ದ ತರುಣ್ ಈಗ ಪ್ರಿಯಾಂಕಾ ಆಚಾರ್ ನ್ನು ತಮ್ಮದೇ ನಿರ್ಮಾಣದ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ನಿಲ್ಲಿಸುತ್ತಿದ್ದಾರೆ. ಅದ್ವೈತ್ ಗುರುಮೂರ್ತಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ತರುಣ್ ಸುಧೀರ್ ಹಾಗೂ ಅಟ್ಲಾಂಟಾ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

