‘ಮಹಾನಟಿ’ ಕೀರ್ತಿ ಸುರೇಶ್‌ಗೆ (Keerthy Suresh) ಮದುವೆಯ ನಂತರವೂ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಮದುವೆಯಾದ್ಮೇಲೆ ನಟಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಗೌರಿ ಜೊತೆ ಆಮೀರ್ ಖಾನ್ ಲಂಚ್ ಡೇಟ್
ಕೀರ್ತಿ ಮದುವೆಯಾದ್ಮೇಲೆಯೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮಿಳಿನ ‘ರಿವಾಲ್ವರ್ ರೀಟಾ’, ‘ಕನ್ನಿವೇದಿ’ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಈ ಚಿತ್ರಗಳ ಅಪ್‌ಡೇಟ್ ಸಿಗಲಿದೆ. ಇದರೊಂದಿಗೆ ಒಟಿಟಿಯಲ್ಲಿ ಪ್ರಸಾರವಾಗುವ ವೆಬ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್
ವಿಜಯ್ ದೇವರಕೊಂಡ ಮುಂಬರುವ ಸಿನಿಮಾವೊಂದಕ್ಕೆ ಕೀರ್ತಿ ನಾಯಕಿಯಾಗಿ ನಟಿಸುವ ವಿಚಾರ ದಟ್ಟವಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಗಬೇಕಿದೆ. ಇದರೊಂದಿಗೆ ಮಲಯಾಳಂನ ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಕೂಡ ಮಹಾನಟಿಗೆ ಅರಸಿ ಬಂದಿದೆ. ಅರ್ಧ ಡಜನ್ ಚಿತ್ರಗಳು ನಟಿಯ ಕೈಯಲ್ಲಿವೆ. ಒಟ್ನಲ್ಲಿ ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾದಲ್ಲಿ ಅವರು ಸದ್ದು ಮಾಡ್ತಿದ್ದಾರೆ.
15 ವರ್ಷಗಳಿಂದ ಉದ್ಯಮಿ ಆ್ಯಂಟೋನಿ ಜೊತೆ ಕೀರ್ತಿ ಡೇಟಿಂಗ್ ಮಾಡುತ್ತಿದ್ದರು. 2024ರ ಡಿಸೆಂಬರ್ 12ರಂದು ಬಹುಕಾಲದ ಗೆಳೆಯನೊಂದಿಗೆ ನಟಿ ಮದುವೆಯಾದರು. ಗೋವಾದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು.
ಮದುವೆ ಬಳಿಕ ಅವರು ನಟಿಸಿದ ಮೊದಲ ಬಾಲಿವುಡ್ ಸಿನಿಮಾ ರಿಲೀಸ್ ಆಗಿತ್ತು. ವರುಣ್ ಧವನ್ ಜೊತೆ ‘ಬೇಬಿ ಜಾನ್’ (Baby John) ಸಿನಿಮಾದಲ್ಲಿ ನಟಿಸಿದರು. ಕಳೆದ ವರ್ಷ ಡಿ.25ರಂದು ಚಿತ್ರ ರಿಲೀಸ್ ಆಯ್ತು.