ಮಂಡ್ಯ: ಶ್ರವಣಬೆಳಗೊಳಕ್ಕೂ ಮೊದಲೇ ಜಿಲ್ಲೆಯಲ್ಲಿ ಅತೀ ಪುರಾತನ ಮೂರ್ತಿಯೊಂದಕ್ಕೆ ಮಹಾಮಸ್ತಕಾಭಿಷೇಕ ನಡೆಯಲಿದೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರವಣಬೆಳಗೂಳದ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಅದಕ್ಕಿಂತ ಮೊದಲೇ ಶ್ರವಣಬೆಳಗೂಳದ ಗೊಮ್ಮಟೇಶ್ವರ ಮೂರ್ತಿಗಿಂತ ಹಳೆಯದಾದ ಮತ್ತು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪ್ರಾಚೀನವಾದ 11 ಅಡಿ ಗೊಮ್ಮಟೇಶ್ವರ ಮೂರ್ತಿಗೆ ಮಸ್ತಕಾಭೀಷೇಕ ನಡೆಯಲಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಆರತಿಪುರದಲ್ಲಿ ಪ್ರಾಚೀನವಾದ ಈ ಮೂರ್ತಿ ಇದೆ. ಆರತಿಪುರದ ಗೊಮ್ಮಟೇಶ್ವರನಿಗೆ ಶ್ರವಣಬೆಳಗೂಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಮುಂಚೆಯೇ ಅದ್ಧೂರಿಯಾಗಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ಗಂಗ ಮತ್ತು ಹೊಯ್ಸಳರ ಕಾಲದಲ್ಲಿ ಈ ಮೂರ್ತಿ ಸ್ಥಾಪನೆಯಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಆರತಿಪುರದ ಗೊಮ್ಮಟೇಶ್ವರನಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿತ್ತು. ಆದರೆ ಕಾಲಾಂತರದಲ್ಲಿ ಅದು ನಿಂತು ಹೋಗಿತ್ತು. ಆದರೆ ಈ ಆರತಿಪುರದ ಗೊಮ್ಮಟೇಶ್ವರಮೂರ್ತಿಗೆ ಇದೇ ಡಿಸೆಂಬರ್ 1 ರಿಂದ 3 ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿದುಬಂದಿದೆ.