ಹಾಸನ: ಕಳೆದ 9 ದಿನಗಳಿಂದ ನಡೆಯುತ್ತಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ತೆರೆಬಿದ್ದಿದೆ. ಕೊನೆಯ ದಿನವಾದ ಇಂದು 58.8 ಅಡಿ ಎತ್ತರದ ಮಹಾಮೂರ್ತಿಗೆ ನೀರು, ಎಳನೀರು, ಕಬ್ಬಿನರಸ, ಕಲ್ಕಚೂರ್ಣ, ಕ್ಷೀರ, ಅರಿಶಿನ, ಶ್ರೀಗಂಧ ಮತ್ತು ಅಷ್ಟಗಂಧ ಅಭಿಷೇಕ ಮಾಡಲಾಯ್ತು.
ಕಡೆಯ ದಿನವಾದ ಇಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಜೈನಮಠದ ಬಳಿಯೇ ಏಕಶಿಲಾ ಮೂರ್ತಿಗೆ ನಮಿಸಿದ್ರು. ವಿಂದ್ಯಗಿರಿಯಲ್ಲಿ ಎಲ್ಲಿ ನೋಡಿದ್ರೂ ಭಕ್ತ ಸಾಗರವೇ ಕಾಣುತ್ತಿತ್ತು. ಇದೇ ವೇಳೆ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಾಳೆ ಸಮಾರೋಪ ಸಮಾರಂಭ ನಡೆಯಲಿದೆ. ಮುಂದಿನ ಜೂನ್‍ವರೆಗೆ ಪ್ರತಿ ಭಾನುವಾರ ಮಸ್ತಕಾಭಿಷೇಕ ನಡೆಯಲಿದೆ ಅಂತಾ ತಿಳಿಸಿದ್ರು.
Advertisement
ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಜೈನಧರ್ಮ ನಮ್ಮ ದೇಶದ ರತ್ನವಿದ್ದಂತೆ, ಅಹಿಂಸೆಗೆ ಒತ್ತು ನೀಡುವ ಏಕೈಕ ಧರ್ಮ ಜೈನಧರ್ಮ. ಭಯೋತ್ಪಾದನೆ ಮಟ್ಟಹಾಕಲು ಜೈನಧರ್ಮದ ಸಂದೇಶದಲ್ಲಿ ಪರಿಹಾರವಿದೆ. ಬಾಹುಬಲಿ ಮೂರ್ತಿ ಅದ್ಭುತ ಪ್ರತಿಮೆ. ಇಲ್ಲಿಗೆ ಬಂದ ತಕ್ಷಣ ನನಗೆ ಶಾಂತಿಯ ಅನುಭೂತಿಯಾಯಿತು. ಇಡೀ ಪ್ರಪಂಚಕ್ಕೆ ತ್ಯಾಗ, ಶಾಂತಿಯ ಸಂದೇಶ ಸಾರುವ ತಾಣ ಶ್ರವಣಬೆಳಗೊಳ. ಇಲ್ಲಿಗೆ ಭೇಟಿ ನೀಡಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ರಾಜನಾಥ್ ಸಿಂಗ್ ತಮ್ಮ ಅನುಭವ ಹಂಚಿಕೊಂಡರು.