ಮುಟ್ಟಾಳೆ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಮೈ ಮಹಾಲಿಂಗ ನಾಯ್ಕ

Public TV
1 Min Read
MAHALINGA NAIK

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಪಗ್ರತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಮುಟ್ಟಾಳೆ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಏಕಾಂಗಿಯಾಗಿ 7 ಸುರಂಗಗಳನ್ನು ಕೊರೆದು ಕೃಷಿ ಭೂಮಿಗೆ ನೀರು ಹರಿಸಿದ ಮಹಾಲಿಂಗ ನಾಯ್ಕ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇಧಿಗ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡರು. ಈ ವೇಳೆ ಮಹಾಲಿಂಗ ನಾಯ್ಕ ಅವರು ಮುಟ್ಟಾಳೆ ಧರಿಸಿರುವುದು ಎಲ್ಲರ ಗಮನ ಸೆಳೆದಿದೆ.

mahalinga naik

ಮಹಾಲಿಂಗ ನಾಯ್ಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ. 27 ವರ್ಷದ ಮಹಾಲಿಂಗ ನಾಯ್ಕ ಅವರು ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‍ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಸುರಂಗ ನೀರಿನ ವ್ಯವಸ್ಥೆಯ ಮೊರೆ ಹೋದರು. ಹೀಗೆ ವಿದ್ಯುತ್ ರಹಿತವಾಗಿ ಗುರುತ್ವದ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮನೆ ಮಾತಾದರು.

mahalinga naik

6 ಸುರಂಗ ಕೊರೆದರೂ ಮಹಾಲಿಂಗ ನಾಯ್ಕ ಅವರಿಗೆ ನೀರು ಸಿಕ್ಕಿರಲಿಲ್ಲ. ಆದರೂ ತನ್ನ ಪ್ರಯತ್ನ ಬಿಡದ ಅವರು 7 ಸುರಂಗ ಕೊರೆದೇ ಬಿಟ್ಟರು. ಈ ವೇಳೆ ಅವರ ಪ್ರಯತ್ನ ಯಶಸ್ಸು ದೊರಕಿತ್ತು. ಇದೀಗ ಇವರ ಈ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಸುರಂಗ ಕೊರೆದು ನೀರು ಹರಿಸಿದ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ

ಇವರ ಜೊತೆಗೆ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ, ಶಿವಮೊಗ್ಗದ ಹೆಚ್. ಆರ್ ಕೇಶವಮೂರ್ತಿ, ಮಾಜಿ ಮುಖ್ಯಮಂತ್ರಿ ದಿ. ಕಲ್ಯಾಣ್ ಸಿಂಗ್, ಭಾರತ್ ಬಯೋಟೆಕ್‍ನ ಕೃಷ್ಣ ಎಲ್ಲಾ ದಂಪತಿ, , ನಟಿ ಸಾಹುಕಾರ್ ಜಾನಕಿ, ಗಾಯಕ ಸೋನು ನಿಗಂ, ಒಲಿಂಪಿಕ್ ವಿಜೇತ ಕ್ರೀಡಾಪಟು ನೀರಜ್ ಚೋಪ್ರಾ ಸೇರಿದಂತೆ ಒಟ್ಟು 74 ಗಣ್ಯರಿಗೆ ಪದ್ಮ ಪ್ರದಾನ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *