ಭೋಪಾಲ್: ಇಂದಿನಿಂದ ದೀಪಾವಳಿ ಆರಂಭವಾಗಿದ್ದು, ದೇಶಾದ್ಯಂತ ಜನರು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ಬುಧವಾರ ಅಮವಾಸ್ಯೆ ಆಗಿದ್ದು ಬಹುತೇಕ ಜನರು ತಮ್ಮ ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಮಧ್ಯಪ್ರದೇಶ ರಾಜ್ಯದ ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯವನ್ನು ನಗದು, ಚಿನ್ನಾಭರಣ ಮತ್ತು ವಜ್ರಾಭರಣ ಒಳಗೊಂಡಂತೆ ಒಟ್ಟು 100 ಕೋಟಿ ರೂ.ನಲ್ಲಿ ಅಲಂಕರಿಸಲಾಗಿದೆ.
ಸಾಮನ್ಯವಾಗಿ ಮಹಾಲಕ್ಷ್ಮೀ ಪೂಜೆಯಲ್ಲಿ ದೇವಿಯ ಆಹವಾನೆಗಾಗಿ ಹಣ, ಚಿನ್ನಾಭರಣಗಳನ್ನು ಇಡುತ್ತಾರೆ. ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯವನ್ನು ಗರಿ ಗರಿ ನೋಟುಗಳಿಂದ ಅಲಂಕರಿಸಲಾಗಿದೆ. ನಗರದ ಪುರಾಣ ದೇವಾಲಯಗಳಲ್ಲಿ ಮಹಾಲಕ್ಷ್ಮೀ ದೇಗುಲ ಒಂದಾಗಿದ್ದು, ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಲಾಗಿದೆ. ದೇವಿಯ ಮುಂದೆ ಚಿನ್ನಾಭರಣ, ವಜ್ರಾಭರಣ ಸೇರಿದಂತೆ ಕಂತೆ ಕಂತೆ ನೋಟುಗಳನ್ನು ಇರಿಸಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ, ನಾನು ಹಲವು ವರ್ಷಗಳಿಂದ ಇಲ್ಲಿಯ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಮೊದಲು 6 ರಿಂದ 7 ಲಕ್ಷ ರೂ. ಮಾತ್ರ ಬಳಸಿ ದೇಗುಲವನ್ನು ಅಲಂಕಾರ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 100 ಕೋಟಿ ರೂ.ನಲ್ಲಿ ಆಲಯವನ್ನು ಅಲಂಕರಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv