– ಮನುಷ್ಯರು ಹೀಗೆ ಮಾಡ್ತಾರಾ ಅಂತರ ಕಣ್ಣೀರಿಟ್ಟ ಮಹಾಲಕ್ಷ್ಮಿ ತಾಯಿ
ಬೆಂಗಳೂರು: ಕೊಲೆ ಮಾಡಿದ್ಮೇಲೆ ಜೀವನೇ ಇರಲ್ಲ. ಅಂತದ್ರಲ್ಲಿ ದೇಹವನ್ನ ತುಂಡು ತುಂಡಾಗಿ ಕತ್ತರಿಸ್ತಾನೆ ಅಂದ್ರೆ ಹಂತಕನ ಮನಸ್ಸು ಅದೆಷ್ಟು ಕ್ರೂರವಾಗಿರಬೇಕು ಅನ್ನೋದು ಫೋಟೋವೊಂದರಿಂದ ಗೊತ್ತಾಗಿದೆ.
- Advertisement -
ಹೌದು. ಗಂಡನಿಂದ ದೂರಾಗಿದ್ದ ಮಹಿಳೆಯನ್ನ (Bengaluru Woman) ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ, ಹಂತಕನ ಈ ಕ್ರೂರತ್ವ ಕುಟುಂಬದವರೇ ಬೆಚ್ಚಿ ಬೆರಗಾಗಿದ್ದಾರೆ. ಈ ಫೋಟೋ ಸಹ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಲೆಯಾದ ಮಹಿಳೆ ತಾಯಿ ಮೀನಾ, ಮನೆ ಬೀಗ ತೇಗೆದಾಗ ಮಹಾಲಕ್ಷ್ಮಿ ದೇಹ ತುಂಡಾಗಿ ಫ್ರೀಡ್ಜ್‌ನಲ್ಲಿತ್ತು. ಕೊನೆಯದ್ದಾಗಿ ರಕ್ಷಾಬಂಧನ ಹಬ್ಬದಂದು ನೋಡಿದ್ದು, ನನಗೆ ಮನೆ ಓನರ್ ಫೋನ್ ಮಾಡಿದ್ರು. ಮನುಷ್ಯರು ಅನ್ನಿಸಿಕೊಂಡವರು ಇಂತಹ ಕೆಲಸ ಮಾಡ್ತಾರಾ? ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.
- Advertisement -
- Advertisement -
ಇನ್ನೂ ಮೃತ ಮಹಾಲಕ್ಷ್ಮಿ ಪತಿ ಹೇಮಂತ ಮಾತನಾಡಿ, ಮದುವೆಯಾಗಿ 6 ವರ್ಷ ಆಗಿತ್ತು. ಓನರ್ ಈಚೆಗೆ ರೂಂ ನಿಂದ ವಾಸನೆ ಬರ್ತಿದೆ ಅಂತ ಫೋನ್ ಮಾಡಿದ್ದರು. ಬಂದು ನೋಡಿದಾಗ ಹೀಗಾಗಿತ್ತು. ಮೂಲತಃ ನೇಪಾಳ ಆದ್ರು ಅವರ ಅಪ್ಪ ಇಲ್ಲೇ ನೆಲೆಸಿದ್ದರು. ಮಹಾಲಕ್ಷ್ಮಿ ಇಲ್ಲೇ ಹುಟ್ಟಿ ಬೆಳೆದವರು. ನಾನು ಬೇರೆ ಇರ್ತಿನಿ ಅಂತ ಹೇಳಿದ್ದರು. ಹಾಗಾಗಿ 9 ತಿಂಗಳಿಂದ ದೂರ ಇದ್ವಿ. ಮಗು ನನ್ನ ಜೊತೆಯೇ ಇದೆ ಎಂದಿದ್ದಾರೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?
- Advertisement -
ನಾನು ಮಹಾಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಅಶ್ರಫ್ ಮೇಲೆ ದೂರು ಕೊಟ್ಟಿದ್ದಿನಿ, ಮೇ ತಿಂಗಳಲ್ಲಿ ನನಗೆ ಇವರ ಸಂಬಂಧಧ ಬಗ್ಗೆ ಗೊತ್ತಾಯ್ತು. 25 ದಿನಗಳ ಹಿಂದೆ ನೆಲಮಂಗಲದಲ್ಲಿ ಭೇಟಿ ಮಾಡಿದ್ದೆ, ಆಗ ಕೋಪ ಇರಲಿಲ್ಲ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ