ಪರಶುರಾಮ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ, ಬಹುಭಾಷಾ ತಾರೆ (Actress) ಮಹಾಲಕ್ಷ್ಮಿ (Mahalakshmi) ಮತ್ತೆ ಬಣ್ಣದ ಪ್ರಪಂಚಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದಕ್ಷಿಣದ ಅಷ್ಟೂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಮಹಾಲಕ್ಷ್ಮಿ 80ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಬೇಡಿಕೆಯಲ್ಲಿರುವಾಗಲೇ ಚಿತ್ರೋದ್ಯಮದಿಂದ ದೂರ ಸರಿದರು.
ಚಿತ್ರೋದ್ಯಮದಿಂದ ದೂರವಾದ ನಂತರ ಮಹಾಲಕ್ಷ್ಮಿ ಏನು ಮಾಡುತ್ತಿದ್ದರು ಎಂದು ಗೊತ್ತಾಗಿದ್ದೆ ಹಲವು ವರ್ಷಗಳ ನಂತರ. ಅವರು ಸನ್ಯಾಸಿಯಾದರು ಎಂದು ಹೇಳಲಾಗುತ್ತಿತ್ತು. ಅದಕ್ಕೆ ಸಾಕ್ಷಿಯಾಗಿ ಹಲವು ಫೋಟೋಗಳು ಕೂಡ ಹರಿದಾಡಿದವು. ಆನಂತರ ಅದು ಸುಳ್ಳು ಎಂದು ಬಿಂಬಿಸುವ ಪ್ರಯತ್ನ ಕೂಡ ನಡೆಯಿತು. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್
ಇದೀಗ ಮತ್ತೆ ಮಹಾಲಕ್ಷ್ಮಿ ಸುದ್ದಿಗೆ ಸಿಕ್ಕಿದ್ದಾರೆ. ಅವರು ಮತ್ತೆ ಬಣ್ಣದ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕನ್ನಡದ ಮನರಂಜನಾ ವಾಹಿನಿಯೊಂದು ಅವರನ್ನು ಸಂಪರ್ಕ ಮಾಡಿದ್ದು, ಧಾರಾವಾಹಿಯೊಂದರ (Serial) ಪ್ರಮುಖ ಪಾತ್ರ ಮಾಡಲು ಕೇಳಿದೆಯಂತೆ. ಅದಕ್ಕೆ ಮಹಾಲಕ್ಷ್ಮಿ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾಲಕ್ಷ್ಮಿ ಈ ಹಿಂದೆ ಬಣ್ಣದ ಪ್ರಪಂಚಕ್ಕೆ ಎರಡನೇ ಬಾರಿ ಕಾಲಿಟ್ಟಾಗಲೂ ಕನ್ನಡ ಚಿತ್ರೋದ್ಯಮವನ್ನೆ ಆರಿಸಿಕೊಂಡಿದ್ದಾರೆ. ಇದೀಗ ಮತ್ತೆ ಕನ್ನಡ ಕಿರುತೆರೆಯ ಮೂಲಕ ನಟನೆಯತ್ತ (Acting) ಮುಖ ಮಾಡುತ್ತಿದ್ದಾರೆ. ಅವರು ನಟಿಸಲಿರುವ ಧಾರಾವಾಹಿ ಯಾವುದು? ಯಾವ ಚಾನೆಲ್ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.
Web Stories