ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮೀ ಮತ್ತು ರವೀಂದರ್ ಇತ್ತೀಚೆಗಷ್ಟೇ ತಿರುಚೆಂಡೂರ್ (Tiruchendur) ಮುರುಗನ್ (Murugan) ದೇವಸ್ಥಾನಕ್ಕೆ ಭೇಟಿ ಕೊಟ್ಟು ಮುರುಗನ್ ದೇವರ ಆಶೀರ್ವಾದ ಪಡೆದಿದ್ದಾರೆ. ಮದುವೆಯ ನಂತರ ಅವರು ಟೆಂಪಲ್ ರನ್ ಮಾಡುತ್ತಿದ್ದು, ಮೊನ್ನೆಯಷ್ಟೇ ತಮ್ಮ ಮನೆ ದೇವರಿಗೂ ಹೋಗಿದ್ದರು. ತಮ್ಮ ವೈಹಿವಾಹಿಕ ಜೀವನ ಚೆನ್ನಾಗಿರಲಿ ಎಂದು ಅವರು ದೇವರಿಗೆ ಮೊರೆ ಹೋಗಿದ್ದಾರೆ. ಅಲ್ಲದೇ, ತಾವಷ್ಟೇ ಅಲ್ಲ, ಇತರರಿಗೆ ದೇವರು ಒಳ್ಳೆದು ಮಾಡಲಿ ಎಂದು ಬೇಡಿಕೊಂಡಿದ್ದಾರೆ.
Advertisement
ಕಿರುತೆರೆಯ ಈ ಜೋಡಿ ಮದುವೆ ಆಗುತ್ತಿದ್ದಂತೆಯೇ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಅದೊಂದು ಮಿಸ್ ಮ್ಯಾಚ್ ಜೋಡಿ ಎಂದು ಕಾಲೆಳೆಯಲಾಯಿತು. ಅಲ್ಲದೇ, ರವೀಂದರ್ ತೂಕದ ವ್ಯಕ್ತಿ ಆಗಿದ್ದರಿಂದ, ಹಣಕ್ಕಾಗಿ ಅಂತವನನ್ನು ಸುಂದರಿ ಮಹಾಲಕ್ಷ್ಮಿ (Mahalakshmi) ಮದುವೆ ಆಗಿದ್ದಾರೆ ಎನ್ನುವ ಆರೋಪ ಕೂಡ ಮಾಡಲಾಯಿತು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದರಿಂದ, ಆ ಕುರಿತು ಟ್ರೋಲ್ ಮಾಡಲಾಯಿತು. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ
Advertisement
Advertisement
ಮದುವೆಯ ನಂತರ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ (Ravinder Chandrasekaran) ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಒಟ್ಟೊಟ್ಟಿಗೆ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಜೋಡಿ ಎಲ್ಲಿಯೇ ಹೋದರೂ, ಅಭಿಮಾನಿಗಳು ಮುತ್ತಿಕ್ಕುತ್ತಿದ್ದಾರೆ. ಹಾಗಾಗಿ ಪತಿಯನ್ನು ರಕ್ಷಿಸುವ ಜವಾಬ್ದಾರಿ ಮಹಾಲಕ್ಷ್ಮಿ ಮೇಲೆ ಬಿದ್ದಿದೆ. ಆದಷ್ಟು ಪತಿಯ ಜೊತೆಯೇ ಇದ್ದುಕೊಂಡು ಗಂಡನ ರಕ್ಷಣೆಗೆ ನಿಲ್ಲುತ್ತಾರಂತೆ ಮಹಾಲಕ್ಷ್ಮಿ.
Advertisement
ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾದ (Marriage) ನಂತರ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.
ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ (Temple) ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.