ಬೆಂಗಳೂರು: ಇಲ್ಲಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ (Vyalikaval) ನಡೆದಿರುವ ಒಂಟಿ ಮಹಿಳೆ ಮಹಾಲಕ್ಷ್ಮಿ ಹತ್ಯೆ ಪ್ರಕರಣ ಸಂಬಂಧ ವೈದ್ಯರಿಂದು ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮತ್ತೊಂದೆಡೆ ವೈಯಾಲಿಕಾವಲ್ ಪೊಲೀಸರು ತನಿಖೆ (Vyalikaval Police Investigation) ಚುರುಕುಗೊಳಿಸಿದ್ದು, ಭಯಾನಕ ಸತ್ಯಗಳನ್ನು ಬಯಲಿಗೆಳೆಯುತ್ತಿದ್ದಾರೆ.
\
ಪೊಲೀಸರ ತನಿಖೆಯಲ್ಲಿ, ಫ್ರಿಡ್ಜ್ ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಇದರಿಂದ ಮಹಾಲಕ್ಷ್ಮಿ ಮರ್ಡರ್ ಹಿಂದೆ ಹಂತಕ ಒಬ್ಬನೆ ಇದ್ದಾನಾ? ಅಥವಾ ಇಬ್ಬರು ಇದ್ದಾರಾ ಅನ್ನೋ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಎಫ್‌ಎಸ್‌ಎಲ್ (FSL) ತಜ್ಞರು ಶೋಧ ಮುಂದುವರಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು
ಶಂಕಿತ ಹಂತಕನ ಸಹೋದರನ ವಿಚಾರಣೆ:
ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವೈಯಾಲಿಕಾವಲ್ (Vyalikaval) ಪೊಲೀಸರು, ಸೋಮವಾರ ಬೆಂಗಳೂರಿನಲ್ಲಿದ್ದ ಹಂತಕನ ಸಹೋದರನನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಸುಮಾರು 2 ಗಂಟೆಗಳಕಾಲ ನಡೆದ ವಿಚಾರಣೆಯಲ್ಲಿ ಹಲವು ಮಾಹಿತಿಗಳನ್ನ ಸಂಗ್ರಹಿಸಿದ್ದಾರೆ. ಕೊಲೆ ಮಾಡಿ ಕರೆ ಮಾಡಿದ್ದರ ಬಗ್ಗೆ ಶಂಕಿತ ಹಂತನ ಸಹೋದರ ಮಾಹಿತಿ ನೀಡಿರೋದಾಗಿಯೂ ತಿಳಿದುಬಂದಿದೆ. ಸುಮಾರು 30 ತುಂಡುಗಳನ್ನಾಗಿ ಕತ್ತರಿಸಿದ ಬಳಿಕ ಸಹೋದರನಿಗೆ ಕಾಲ್ ಮಾಡಿ ಹೇಳಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡಿಗರನ್ನ ಕೆಣಕಿದ್ದ ʻಸುಗಂಧʼ ರಾಣಿ – ಕೆಲಸದಿಂದ ಕಿತ್ತೊಗೆದು ಬಿಸಿಮುಟ್ಟಿಸಿದ ಕಂಪನಿ
ಶಂಕಿತ ಹಂತಕ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ:
ಮಹಾಲಕ್ಷ್ಮಿ ಕೊಲೆ ಪ್ರಕರಣದ ಶಂಕಿತ ಹಂತಕ ಕಳೆದ 6 ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಕೊಲೆಯಾಗಿರುವ ಮಹಾಲಕ್ಷ್ಮಿ ಹಾಗೂ ಶಂಕಿತ ಹಂತಕ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರಂನ ಬಟ್ಟೆ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಶಂಕಿತ ಹಂತಕ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಹಂತಕ ಕೆಲಸ ಬಿಟ್ಟ ಬಳಿಕ ತನ್ನಿಂದ ಅಂತರ ಕಾಯ್ದುಕೊಳ್ತಾ ಇದ್ದಾಳೆ ಅನ್ನೋ ಅನುಮಾನ ಆತನಲ್ಲಿ ಹುಟ್ಟಿಕೊಂಡಿತ್ತಂತೆ. ಆಗಾಗ ಅಂತರ ಕಾಯ್ದುಕೊಳ್ಳುವ ವಿಚಾರಕ್ಕೆ ಇಬ್ಬರ ಮದ್ಯೆ ಗಲಾಟೆಯೂ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣಕ್ಕೆ ಶಂಕಿತ ಹಂತಕ ಭೀಕರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ಬೆಂಗಳೂರಿನ ದೇವಸ್ಥಾನದಲ್ಲಿ ಆಗಮಶಾಸ್ತ್ರದಂತೆ ಶುದ್ಧಿಕಾರ್ಯ