– ಹಣಕ್ಕಾಗಿ ಪೀಡಿಸುತ್ತಿದ್ದಳು, ನನ್ನನ್ನೂ ಥಳಿಸಿದ್ದಳು
ಬೆಂಗಳೂರು: ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ (Mahalakshmi Murder Case) ಟ್ವಿಸ್ಟ್ ಸಿಕ್ಕಿದೆ. ʻನಾನು ಅವಳನ್ನು ಕೊಲ್ಲದಿದ್ದರೆ ನನ್ನನ್ನು ಕೊಲ್ಲುತ್ತಿದ್ದಳುʼ ಅಂತ ಆತ್ಮಹತ್ಯೆ ಮಾಡಿಕೊಂಡ ಹಂತಕ ಮುಕ್ತಿ ರಂಜನ್ ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಮಹಾಲಕ್ಷ್ಮಿ ಕೊಲೆ ರಹಸ್ಯ ಈಗ ಬಯಲಾಗಿದೆ.
Advertisement
ಕಳೆದ ಸಪ್ಟೆಂಬರ್ ಮೊದಲ ವಾರದಲ್ಲಿ ನಡೆದ ಕೊಲೆ ಕೇಸ್ ಇದಾಗಿದೆ. ಮಹಾಲಕ್ಷ್ಮಿಯನ್ನು ಕೊಂದು ಆಕೆಯ ದೇಹವನ್ನು 53 ಭಾಗಗಳಾಗಿ ಕತ್ತರಿಸಿ ಆ ಎಲ್ಲಾ ಮಾಂಸದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟು ಮುಕ್ತಿ ರಂಜನ್ ಪರಾರಿಯಾಗಿದ್ದ. ಪೊಲೀಸರು ಆತನನ್ನ ಒಡಿಶಾದ (Odisha) ಭದ್ರಕ್‌ನಲ್ಲಿ ಪತ್ತೆಹಚ್ಚಿದ್ದರು. ಆದ್ರೆ ಪೊಲೀಸರು ಆತನನ್ನ ಪತ್ತೆ ಮಾಡುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಆತ ಮಹಾಲಕ್ಷ್ಮಿ ಕೊಲೆ ಸಂಬಂಧ ಬರೆದಿದ್ದ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿತ್ತು. ಇದನ್ನೂ ಓದಿ: ವೈಜಾಗ್ ಸ್ಟೀಲ್ ಪುನಚ್ಚೇತನ ವಿಚಾರ – ನಿರ್ಮಲಾ ಸೀತಾರಾಮನ್, ನಾಯ್ಡು ಜೊತೆಗೆ ಹೆಚ್‌ಡಿಕೆ ಚರ್ಚೆ
Advertisement
Advertisement
ಒರಿಯಾ ಭಾಷೆಯಲ್ಲಿ ಬರೆಯಲಾಗಿದ್ದ ಆ ಡೆತ್ ನೋಟ್ (Death Note) ಅನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಭಾಷಾಂತರದ ಪ್ರತಿ ಈಗ ಪೊಲೀಸರಿಗೆ ಲಭ್ಯವಾಗಿದ್ದು, ಅದರಲ್ಲಿನ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮೊದಲು ಬಂದ ವರದಿಗಳಲ್ಲಿ ಆತ ಡೆತ್ ನೋಟ್‌ನಲ್ಲಿ ಆಕೆ ಕೊಲೆ ಮಾಡಿದ್ದಕ್ಕೆ ಕೊಲೆಗೂ ಮುನ್ನ ನಡೆದಿದ್ದ ಜಗಳವೇ ಕಾರಣ ಎಂದು ಹೇಳಲಾಗಿತ್ತು. ಆದರೆ, ಜಗಳವೊಂದೇ ಕಾರಣವಲ್ಲ. ಅದಕ್ಕೂ ಮಿಗಿಲಾದ ವಿಚಾರಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 150 ವರ್ಷಗಳ ಇತಿಹಾಸವಿರುವ ಟ್ರಾಮ್ ರೈಲು ಸೇವೆ ಸ್ಥಗಿತಗೊಳಿಸಲು ಕೋಲ್ಕತ್ತಾ ನಿರ್ಧರಿಸಿದ್ದೇಕೆ? ಇಲ್ಲಿದೆ ಕಾರಣ
Advertisement
ಮೃತ ಹಂತಕನ ಡೆತ್‌ನೋಟ್‌ನಲ್ಲಿ ಏನಿತ್ತು?
ಮಹಾಲಕ್ಷ್ಮಿ ತನ್ನನ್ನು ಕೊಲ್ಲಲು ಮುಂದಾಗಿದ್ದಳು ಮತ್ತು ದೇಹವನ್ನು ಎಸೆಯುವುದಕ್ಕೆ ಕಪ್ಪು ಸೂಟ್‌ಕೇಸ್ ಸಹ ಖರೀದಿಸಿದ್ದಳು ಎಂದು ಬರೆದಿದ್ದಾನೆ. ಇದಕ್ಕೆ ಸರಿಯಾಗಿ ಮಹಾಲಕ್ಷ್ಮಿ ಮನೆಯೊಳಗಿನ ಫ್ರಿಡ್ಜ್ ಬಳಿ ಕಪ್ಪು ಸೂಟ್ಕೇಸ್ ಕೂಡ ಪತ್ತೆಯಾಗಿತ್ತು. ಇದನ್ನೂ ಓದಿ:
ನನ್ನನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಹಾಕಿ ನಂತರ ಎಸೆಯುವುದು ಅವಳ ಉದ್ದೇಶವಾಗಿತ್ತು. ನಾನು ಅವಳನ್ನು ಕೊಲ್ಲದಿದ್ದರೇ, ಮಹಾಲಕ್ಷ್ಮಿ ನನ್ನನ್ನು ಕೊಂದು ನನ್ನ ದೇಹವನ್ನು ಎಸೆಯುತ್ತಿದ್ದಳು. ನಾನು ಅವಳನ್ನು ಆತ್ಮರಕ್ಷಣೆಗಾಗಿ ಕೊಂದಿದ್ದೇನೆ. ಚಿನ್ನದ ಸರ ಮತ್ತು 7 ಲಕ್ಷ ರೂ. ನೀಡಿದ್ದರೂ ಸಹ ಮಹಾಲಕ್ಷ್ಮಿಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಅದಕ್ಕಾಗಿ ಆಕೆಯೂ ನನ್ನನ್ನು ಥಳಿಸಿದ್ದಾಳೆ. ಆಕೆಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿರುವಾಗ ಮಹಾಲಕ್ಷ್ಮಿ ನನ್ನನ್ನು ಥಳಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮತ ಎಣಿಕೆಯಲ್ಲಿ ಅಕ್ರಮ, ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್ ಗಾಂಧಿ
ತ್ರಿಪುರಾ ಮೂಲದ ಮಹಾಲಕ್ಷ್ಮಿ ಬೆಂಗಳೂರಿನ (Bengaluru) ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪೊಲೀಸರ ತನಿಖೆಯಿಂದ ಆಕೆಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಸದ್ಯದಲ್ಲೇ ಪ್ರಕರಣದ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಕ್ತಿರಂಜನ್ ಆತ್ಮಹತ್ಯೆ ಪತ್ರದ ಅನುವಾದ ಮತ್ತು ಆತನ ಮರಣೋತ್ತರ ಪರೀಕ್ಷೆಯ ವರದಿಯನ್ನು ಒಡಿಶಾ ಪೊಲೀಸರಿಂದ ಪಡೆದುಕೊಂಡಿರುವುದರಿಂದ ನಾವು ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದ್ಯಾನನಾದ್ ಹೇಳಿದ್ದಾರೆ. ಇದನ್ನೂ ಓದಿ: ಕದಂಬ ನೌಕಾನೆಲೆ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ – ಗುಪ್ತಚರ ಇಲಾಖೆಯಿಂದ ತನಿಖೆ
ಮುಕ್ತಿರಂಜನ್ ಮಹಾಲಕ್ಷ್ಮಿಯ ದೇಹವನ್ನು ಕತ್ತರಿಸಲು ಬಳಸಿದ ಆಯುಧವು ಇದುವರೆಗೆ ಪತ್ತೆಯಾಗಿಲ್ಲ ಆದರೆ ಬೆಂಗಳೂರಿನ ವೈಯಾಲಿಕಾವಲ್ ಮಾರುಕಟ್ಟೆಯಲ್ಲಿ ಗೃಹಬಳಕೆಗೆ ಬಳಸುವ ಕಟ್ಟರ್‌ಗಳ ಸಣ್ಣ ಅಂಗಡಿಯನ್ನು ನಡೆಸುತ್ತಿರುವ ಮಹಿಳೆಯೊಬ್ಬರು ಆತನ ಫೋಟೋವನ್ನು ತೋರಿಸಿದಾಗ ಅವರನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಅತಿಯಾದ ಆತ್ಮವಿಶ್ವಾಸ ಬಿಟ್ಟು ಕೆಲಸದ ಮೇಲೆ ವಿಶ್ವಾಸ ಇಡಬೇಕು: ಡಿಕೆ ಸುರೇಶ್