ಕುಂಭಮೇಳದ ಬ್ಯೂಟಿ ಮೊನಾಲಿಸಾ ಈಗ ಚಿನ್ನದ ಆಭರಣ ರಾಯಭಾರಿ – ಸಂಭಾವನೆ ಎಷ್ಟು ಗೊತ್ತಾ?

Public TV
1 Min Read
monalisa

ಲಕ್ನೋ: ಮಹಾ ಕುಂಭಮೇಳದ (Maha Kumbh Mela) ವೈರಲ್‌ ಸೆನ್ಸೇಷನ್‌ ಬ್ಯೂಟಿ ಮೊನಾಲಿಸಾ (Monalisa) ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಬಹುನಿರೀಕ್ಷಿತ ಬಾಲಿವುಡ್‌ ಚೊಚ್ಚಲ ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿಯೂ ನೇಮಕಗೊಂಡಿದ್ದಾರೆ.

ಕೇರಳದ ಚೆಮ್ಮನೂರ್‌ ಜ್ಯುವೆಲ್ಲರಿ ತನ್ನ ಪ್ರಚಾರಕ್ಕೆ ಮೊನಾಲಿಸಾಳನ್ನು ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಬಾಬಿ ಚೆಮ್ಮನೂರ್‌ ಮಾತನಾಡಿ, ಮೊನಾಲಿಸಾ ಶುಕ್ರವಾರ ಕೇರಳದ ಕಲ್ಲಿಕೋಟೆಗೆ ಆಗಮಿಸಲಿದ್ದಾರೆ. ಅವರನ್ನು ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುವುದು. ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

Monalisa kumbhamela

ಆಂಗ್ಲ ಮಾಧ್ಯಮ ವರದಿಗಳ ಪ್ರಕಾರ, ಮೊನಾಲಿಸಾ ತಮ್ಮ ಚೊಚ್ಚಲ ಚಿತ್ರಕ್ಕಾಗಿ 21 ಲಕ್ಷ ರೂಪಾಯಿಗಳ ಗಣನೀಯ ಸಂಭಾವನೆಗೆ ಸಹಿ ಹಾಕಿದ್ದಾರೆ. 1 ಲಕ್ಷ ರೂಪಾಯಿಗಳ ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

‘ನಮಸ್ತೆ. ನಾನು ಮಹಾಕುಂಭಕ್ಕೆ ಹೋಗಿ ರುದ್ರಾಕ್ಷಿಗಳನ್ನು ಮಾರುತ್ತಿದ್ದೆ. ಆದರೆ ವಿಧಿ ನನಗಾಗಿ ಬೇರೆ ಯೋಜನೆಗಳನ್ನು ಹೊಂದಿತ್ತು. ಶಿವ ಮತ್ತು ಸಂತರ ಆಶೀರ್ವಾದದಿಂದ, ನಾನು ಜನಪ್ರಿಯತೆಯನ್ನು ಗಳಿಸಿದೆ. ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈ ಕಾರಣದಿಂದಾಗಿ, ನನಗೆ ಬಾಲಿವುಡ್ ಚಿತ್ರವೊಂದರ ಆಫರ್‌ ಬಂದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಅವರು ವೈಯಕ್ತಿಕವಾಗಿ ನನ್ನ ಮನೆಗೆ ಭೇಟಿ ನೀಡಿ ಈ ಅವಕಾಶವನ್ನು ನೀಡಿದ್ದಾರೆ. ನಾನು ಯಾವಾಗಲೂ ನಾಯಕಿಯಾಗುವ ಕನಸು ಕಂಡಿದ್ದೆ. ಇಂದು ಆ ಕನಸು ನನಸಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 6 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

Share This Article