ನವದೆಹಲಿ: ಉತ್ತರಪ್ರದೇಶದ ಕುಲ್ಪಹಾರ್ ಬಳಿ ಮಹಾಕೋಶಾಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 8 ಬೋಗಿಗಳು ಮಗುಚಿಬಿದ್ದಿವೆ. ಘಟನೆಯಲ್ಲಿ ಹಲವು ಮಂದಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
Advertisement
ರೈಲು ಜಬಲ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ತಡರಾತ್ರಿ ಸುಮಾರು 2 ಗಂಟೆಗೆ ಈ ಅವಘಡ ಸಂಭವಿಸಿದ್ದು, ಸದ್ಯ ರಕ್ಷಣಾಕಾರ್ಯ ಭರದಿಂದ ಸಾಗಿದ್ದು ಕೆಲವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಹಳಿ ತಪ್ಪಲು ಕಾರಣವೇನು ಅಂತಾ ಇನ್ನಷ್ಟೆ ತಿಳಿದುಬರಬೇಕಿದೆ.
Advertisement
Advertisement
ಹಳಿತಪ್ಪಿದ ರೈಲಿನ ಎಸಿ ಹಾಗೂ ಸ್ಲೀಪರ್ ಕೋಚ್‍ಗಳು ಮಗುಚಿಬಿದ್ದಿವೆ. ರೈಲ್ವೇ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದೆ ಅಂತಾ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಘಟನೆಯಿಂದ ಪಾರಾದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೇ ನೀರು ಮತ್ತು ಉಪಹಾರಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
12 injured as 8 coaches of Mahakaushal express derailed near Kulapahar in Mahoba, earlier today. pic.twitter.com/PtnIPDyiB7
— ANI UP (@ANINewsUP) March 30, 2017
CM Yogi Adityanath directs state Health Minister SiddharthNath Singh to visit Mahakaushal express derailment site & oversee rescue/relief op pic.twitter.com/uhNZrP1hXA
— ANI UP (@ANINewsUP) March 30, 2017