ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಝೊಮ್ಯಾಟೋ ಜಾಹೀರಾತಿನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಝೊಮ್ಯಾಟೋ ಬಾಯ್ಕಟ್‍ಗೆ ಕರೆ ನೀಡಿವೆ.
Advertisement
ಝೊಮ್ಯಾಟೋ ತನ್ನ ಜಾಹೀರಾತಿನಲ್ಲಿ ಹೃತಿಕ್ ರೋಷನ್, ಉಜ್ಜೈನಿಯಲ್ಲಿನ ಭಗವಾನ್ ಮಹಾಕಾಲೇಶ್ವರನ ಉಲ್ಲೇಖ ಮಾಡಿ, ‘ಪ್ಲೇಟ್ ಇಷ್ಟವಾಯಿತೇ, ನೀವು ಉಜ್ಜೈನಿಯಲ್ಲಿದ್ದರೆ, ಮಹಾಕಾಳೇಶ್ವರನಿಂದ ತರಿಸಿದರೆ ಆಯಿತುʼ ಎಂದು ಹೇಳಿದ್ದಾರೆ. ಇದು ಹಿಂದೂ ದೇವರು ಮಹಾಕಾಳೇಶ್ವರನಿಗೆ ಅಪಮಾನ ಎಂದು ಹಿಂದೂ ಸಂಘಟನೆಗಳ ಆರೋಪವಾಗಿದೆ. ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್
Advertisement
Zomato and Hritik Roshan testing the patience of Hindus !
Just because Hindus don't issue #SarTanSeJuda call does not mean one can hurt the feeling of Hindus time and again !
Hindus demand apology from Zomato !#Zomato_Insults_Mahakal #Boycott_Zomatopic.twitter.com/iYFZiQzSS4
— Guruprasad Gowda (@Gp_hjs) August 21, 2022
Advertisement
ಯಾವ ಸಂಸ್ಥೆಯು ಮಾಂಸಹಾರಿ ಭೋಜನವನ್ನು ಸಹ ವಿತರಿಸುವುದೋ, ಅವರು ಮಹಾಕಾಳೇಶ್ವರನ ಹೆಸರಿನಲ್ಲಿ ಜಾಹೀರಾತು ತಯಾರಿಸಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಆದ್ದರಿಂದ ಈ ಜಾಹೀರಾತನ್ನು ತಯಾರಿಸಿದ ಝೊಮ್ಯಾಟೋ ಹಿಂದೂಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ಝೊಮ್ಯಾಟೋ ಬಹಿಷ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಡಲಾಗಿದೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 17 ಮಂದಿ ಅಸ್ವಸ್ಥ