ಬೆಂಗಳೂರು: ಕಾಂಗ್ರೆಸ್ ಯುವ ನಾಯಕರ ಒಳ ಜಗಳ ಈಗ ಬೀದಿಗೆ ಬಂದಿದೆ. ಈ ಬೀದಿ ಜಗಳವನ್ನು ಶಮನ ಮಾಡಲು ಈಗ ಹಿರಿಯ ನಾಯಕರು ಅಖಾಡಕ್ಕೆ ಧುಮುಕಿದ್ದಾರೆ.
ರಮ್ಯಾ, ನಲಪಾಡ್ ಮಧ್ಯೆ ವಾಕ್ಸಮರದ ಬಳಿಕ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದರು. ಈಗ ಕಾಂಗ್ರೆಸ್‍ನ ಹಿರಿಯ ನಾಯಕ, ಮಾಜಿ ಸಚಿವ ಮಹದೇವಪ್ಪ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ
Advertisement
Advertisement
Advertisement
ಟ್ವೀಟ್ ಮಾಡಿದ ಅವರು, ನಮ್ಮ ಹೋರಾಟ ಬಿಜೆಪಿ ವಿರುದ್ಧ ಇರಬೇಕು ಹೊರತು ರಮ್ಯಾ ವಿರುದ್ಧ ಅಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿಗರಿಗೆ ಟಾಂಗ್ ನೀಡಿದ್ದಾರೆ.
Advertisement
ಎಂಬಿ ಪಾಟೀಲ್ ಅಶ್ವಥ್ ನಾರಾಯಣ ಭೇಟಿ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ ಬಳಿಕ ಕಾಂಗ್ರೆಸ್ ಒಳಜಗಳ ಈಗ ಬೀದಿಗೆ ಬಂದಿದೆ. ಡಿಕೆಶಿ ಹೇಳಿಕೆ ವಿರೋಧಿಸಿ ರಮ್ಯಾ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ
ನನ್ನನ್ನು ಟ್ರೋಲ್ ಮಾಡಲು ನೀವು ಯಾವುದೇ ತೊಂದರೆ ತೆಗೆದುಕೊಳ್ಳಬೇಡಿ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಮಾಜಿ ಸಂಸದೆ ನಟಿ ರಮ್ಯಾ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ್ದರು. ಈ ಹಿನ್ನೆಲೆ ಮಾಧ್ಯಮಗಳ ಮೂಲಕ ರಮ್ಯಾ ಟ್ವೀಟ್‍ಗೆ ಉತ್ತರಿಸಿದ ಡಿಕೆ ಶಿವಕುಮಾರ್, ಯಾರ್ಯಾರಿಗೆ ಏನು ನೋವಿದೆಯೋ ಏನು ದುಗುಡ ಇದೆಯೋ ಗೊತ್ತಿಲ್ಲಾ ಎಂದಿದ್ದರು.
ಇಬ್ಬರ ನಡುವಿನ ಟ್ವೀಟ್ ವಾರ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್‍ನ ಹಲವು ನಾಯಕರು ಪ್ರತಿಕ್ರಿಯಿಸಿದ್ದರು. ನಿನ್ನೆ ಉಡುಪಿಯಲ್ಲಿ ಮೊಹಮ್ಮದ್ ನಲಪಾಡ್ ಮಾತನಾಡಿ, ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲಿಯೂ ಇಲ್ಲದ ರಮ್ಯಾ ಹಠಾತ್ ಯಾಕೆ ಬಂದರು? ಯಾವ ಕುರ್ಚಿಯ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರೆ ಎಂದು ಟಾಂಗ್ ಕೊಟ್ಟಿದ್ದರು.