– ಡಿನ್ನರ್ ಸಭೆಗೆ ಬ್ರೇಕ್ ಬೆನ್ನಲ್ಲೇ ಇಬ್ಬರು ನಾಯಕರ ಮಾತುಕತೆ
ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಅಧ್ಯಕ್ಷ, ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಮತ್ತಷ್ಟು ಬೆಳವಣಿಗೆ ನಡೆಯುತ್ತಿದ್ದು ಇಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರನ್ನು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ (Mhadevappa) ಭೇಟಿಯಾಗಿ ಚರ್ಚೆ ನಡೆಸಿದರು.
- Advertisement -
ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಮಹದೇಪ್ಪ ಸುಮಾರು 40 ನಿಮಿಷ ಮಾತುಕತೆ ನಡೆಸಿದರು. ಮನೆಯಿಂದ ತೆರಳುವ ವೇಳೆ ಯಾವುದೇ ವಿಚಾರ ಚರ್ಚೆ ನಡೆಸಿಲ್ಲ ಎಂದು ಎಂದು ಮಾಧ್ಯಮಗಳಿಗೆ ಹೇಳಿ ತೆರಳಿದರು. ಇದನ್ನೂ ಓದಿ: ಯಾರಿಗೂ ನೋಟಿಸ್ ಕೊಡಲ್ಲ: ಸುರ್ಜೇವಾಲ ಸ್ಪಷ್ಟನೆ
- Advertisement -
- Advertisement -
ಮಹದೇವಪ್ಪ ಭೇಟಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ವಿಶೇಷ ಏನು ಇಲ್ಲ. ವೈಯಕ್ತಿಕ ಕೆಲಸಕ್ಕೆ ಬಂದು ಮಾತನಾಡಿದ್ದಾರೆ. ಯಾಕೆ ಮಾತನಾಡಬಾರದಾ? ಅನೇಕ ಸಮಯದಲ್ಲಿ ಅವರು ಬರ್ತಾರೆ. ನಾವು ಹೋಗುತ್ತೇವೆ. ನಾನು ಅನೇಕ ಸಾರಿ ಸಚಿವರ ಮನೆಗೆ ಹೋಗಿದ್ದೇನೆ. ತಿಂಡಿಗೂ-ಊಟಕ್ಕೆ ಹೋಗಬಾರದಾ? ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
- Advertisement -
ಮಹದೇವಪ್ಪ ವೈಯಕ್ತಿಕ ಕೆಲಸಕ್ಕೆ ಬಂದಿದ್ದರು. ಬೇರೆ ಯಾವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಅವರದ್ದೇನೋ ಕೆಲಸ ಇತ್ತು ಬಂದಿದ್ದಾರೆ. ನಾವು ಬೇರೆ ಯವರ ಮನೆಗೆ ತಿಂಡಿಗೋ, ಊಟಕ್ಕೋ ಹೋಗುವುದನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ. ಅದೆಲ್ಲ ವೈಯಕ್ತಿಕ ಭೇಟಿಗಳು ಎಂದರು.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಸಭೆಯ ಬಳಿಕ ಪರಮೇಶ್ವರ್ ಅವರು ದಲಿತ ನಾಯಕರ (Dalit Leaders) ಸಭೆ ನಡೆಸಲು ಮುಂದಾಗಿದ್ದರು. ಆದರೆ ಈ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಈ ಡಿನ್ನರ್ ಸಭೆಯನ್ನು ನಾವು ರದ್ದು ಮಾಡಿಲ್ಲ. ಮುಂದಕ್ಕೆ ಹಾಕಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದರು.