– ರಂಗಿನಾಟ ಬೇಡ ಮಗ ಅಂದ್ರು ತಾಯಿ ಮಾತನ್ನ ಧಿಕ್ಕರಿಸಿದ್ದ ಸ್ವಾಮಿ
ಚಾಮರಾಜನಗರ: ಕಚ್‍ಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣದಲ್ಲಿ ಬಂಧಿತನಾಗಿರುವ ಎ1 ಆರೋಪಿ ಕಾಮಿ ಸ್ವಾಮಿ ಮಹದೇವನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಹೆಣ್ಣು, ಹೊನ್ನು ಮತ್ತು ಮಣ್ಣಿನ ಮೇಲೆ ಕಣ್ಣು ಹಾಕಿದ್ದ ಮಹದೇವ ಸ್ವಾಮಿ ತಮಿಳುನಾಡಿಗೆ ರಹಸ್ಯವಾಗಿ ಗೋ ಮಾಂಸ ಮಾರಾಟ ಮಾಡ್ತಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಸ್ವತಃ ಮಹದೇವ ಸ್ವಾಮಿ ಮುಂದೆ ನಿಂತು ಬಡ ರೈತರಿಂದ ಗೋವುಗಳನ್ನು ಖರೀದಿಸುತ್ತಿದ್ದನಂತೆ. ಗೋವುಗಳನ್ನು ಖರೀದಿಸಿ ಅವುಗಳನ್ನು ಕಡಿದು ತಮಿಳುನಾಡಿಗೆ ಮಾಂಸ ರವಾನೆ ಮಾಡುವಷ್ಟು ಕೀಳುಮಟ್ಟದ ಕೆಲಸಕ್ಕೆ ಮಹದೇವ ಸ್ವಾಮಿ ಇಳಿದಿದ್ದನು. ಗೋ ಪೂಜೆ ಮಾಡುತ್ತಲೇ ಹಣದ ದುರಾಸೆಗಾಗಿ ಅವುಗಳ ಮಾಂಸ ಮಾರುತ್ತಿದ್ದ ಎಂದು ಸಾಲೂರು ಮಠದ ಭಕ್ತ ರಾಜೇಶ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ಇನ್ನು ಮಹದೇವ ಸ್ವಾಮಿ ತಾಯಿಗೆ ಮಗನ ಎಲ್ಲ ರಂಗಿನಾಟಗಳ ಬಗ್ಗೆ ಮಾಹಿತಿ ಇತ್ತು. ಮಗ ನೀಚ ಕೆಲಸಗಳನ್ನು ಬಿಟ್ಟು ಮಾದಪ್ಪ(ಮಲೆ ಮಹದೇಶ್ವರ)ನ ಸೇವೆ ಮಾಡಿಕೊಂಡು ಚೆನ್ನಾಗಿರು. ಮಠದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ್ರೆ ಆ ಮಾದಪ್ಪ ಸುಮ್ಮನೆ ಬಿಡಲ್ಲ ಎಂದು ಹೆತ್ತ ತಾಯಿ ಹಲವು ಬಾರಿ ಮಗನಿಗೆ ಬುದ್ಧಿ ಹೇಳಿದ್ದರೂ ಸ್ವಾಮಿ ಮಾತ್ರ ತನ್ನ ನಡುವಳಿಕೆಯನ್ನು ಬದಲಿಸಿಕೊಳ್ಳಲಿಲ್ಲ ಎಂದು ರಾಜೇಶ್ ಹೇಳಿದ್ದಾರೆ.
Advertisement
ವಿಷ ಪ್ರಸಾದ ದುರಂತ ಪ್ರಕರಣ ಸಂಬಂಧ ಸುಳ್ವಾಡಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಪ್ಪ ಅಪ್ಪನನ್ನು ಕಳೆದುಕೊಂಡ ಯುವತಿ ರಾಣಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ತಂದೆ-ತಾಯಿಗೆ ವಿಷ ಹಾಕಿದವರಿಗೆ ಕ್ರೂರ ಶಿಕ್ಷೆಯಾಗಬೇಕು. ನಮ್ಮ ತಂದೆ ತಾಯಿ ಯಾವ ರೀತಿ ನರಳಿ ನರಳಿ ಸತ್ತರೋ ಹಾಗೆ ಅವರೂ ಸಾಯಬೇಕು ಎಂದು ಹಿಡಿಶಾಪ ಹಾಕಿದ್ದಾರೆ.
Advertisement
ನಮ್ಮಂತೆ ಹಲವಾರು ಕುಟಂಬಗಳು ಅನಾಥವಾಗಿವೆ. ಆರೋಪಿಗಳ ಕುಟುಂಬಗಳಿಗೂ ಇದೇ ರೀತಿ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಶ್ರದ್ಧಾಂಜಲಿ ಸಭೆಯಲ್ಲಿ ಎಂಜಿ ದೊಡ್ಡಿ, ಬಿದರಹಳ್ಳಿ, ಗೋಡೆಸ್ಟ್ ನಗರ, ವಡ್ಡರದೊಡ್ಡಿ, ದೊಡ್ಡಾಣೆ, ಮಾರ್ಟಳ್ಳಿ, ಸುಳ್ವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv