ನವದೆಹಲಿ: ಛತ್ತೀಸ್‌ಗಢದಲ್ಲಿ (Chhattisgarh) ಮಂಗಳವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹೊತ್ತಲ್ಲಿ ಮಹದೇವ್ ಬೆಟ್ಟಿಂಗ್ ಆ್ಯಪ್ (Mahadev Betting App) ಸುತ್ತ ಜೋರಾಗಿ ರಾಜಕೀಯ ನಡೆಯುತ್ತಿದ್ದು 508 ಕೋಟಿ ಲಂಚ (Corruption) ಪಡೆದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಸಿಎಂ ಭೂಪೇಶ್ ಬಘೇಲ್ (Bhupesh Baghel) ವಿರುದ್ಧ ಇದೀಗ ಬೆಟ್ಟಿಂಗ್ ಆಪ್ ಮಾಲಿಕನೇ ಸ್ಫೋಟಕ ಆರೋಪ ಮಾಡಿದ್ದಾನೆ.
ಸದ್ಯ ದುಬೈನಲ್ಲಿರುವ ಆಪ್ ಮಾಲೀಕ ಶುಭಂ ಸೋನಿ (Subham Soni) ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಬೆಟ್ಟಿಂಗ್ ಆ್ಯಪ್ ರೂಪಿಸಲು ಭೂಪೇಶ್ ಬಘೇಲ್ ಪ್ರೋತ್ಸಾಹಿಸಿದ್ದರು. ತನ್ನ ಬೆಟ್ಟಿಂಗ್ ವ್ಯವಹಾರ ಸಂಬಂಧ 508 ಕೋಟಿ ರೂ. ಹಣವನ್ನು ಸಿಎಂಗೆ ಪಾವತಿಸಿದ್ದೇನೆ. ಭಿಲಾಯ್‌ನಲ್ಲಿ ತಮ್ಮ ಸಹಚರರು ಅರೆಸ್ಟ್ ಆದಾಗ ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾನೆ. ಸದ್ಯ ಇಡಿ ಪ್ರಕರಣದ ತನಿಖೆ ನಡೆಸುತ್ತಿದ್ದು ತನ್ನನ್ನು ರಕ್ಷಿಸಬೇಕು ಎಂದು ಕೇಂದ್ರಕ್ಕೆ ಮೊರೆ ಇಟ್ಟಿದ್ದಾನೆ.
Advertisement
"मैं हूं महादेव बेटिंग ऐप का मालिक, भूपेश बघेल के कहने पर दुबई गया और मैंने अब तक 508 करोड़ रुपये दिए हैं!"
महादेव बेटिंग एप मामले में छत्तीसगढ़ के मुख्यमंत्री भूपेश बघेल पूरी तरह लिप्त हैं। एप के मालिक शुभम सोनी ने दुबई से वीडियो जारी कर बताई सारी सच्चाई। pic.twitter.com/br5B4ODfj6
— BJP (@BJP4India) November 5, 2023
Advertisement
ಈತನ ವೀಡಿಯೋವನ್ನು ಬಿಜೆಪಿ (BJP) ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಇಂಥವರಿಗೆ ಮತ್ತೆ ಅಧಿಕಾರ ನೀಡಬೇಕೇ ಯೋಚಿಸಿ ಎಂದು ಛತ್ತೀಸ್‌ಗಢ ಜನತೆಯನ್ನು ಪ್ರಶ್ನಿಸಿದೆ.
Advertisement
ಈ ಆರೋಪಗಳನ್ನು ಭೂಪೇಶ್ ಬಘೇಲ್ ಖಂಡಿಸಿದ್ದು, ತಮ್ಮ ಪ್ರತಿಷ್ಠೆಗೆ ಮಸಿ ಬಳಿದು ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯೇ ಈ ಷಡ್ಯಂತ್ರ್ಯ ಮಾಡಿದೆ. ಅವನು ಯಾರು ಎನ್ನುವುದೇ ಗೊತ್ತಿಲ್ಲ. ತಿಂಗಳಿನಿಂದ ಈ ಪ್ರಕರಣದ ತನಿಖೆ ಮಾಡುತ್ತಿರುವ ಇಡಿಗೆ ಆತ ಮಾಲೀಕ ಎನ್ನುವುದು ಗೊತ್ತಿರಲಿಲ್ವಾ? ಎರಡು ದಿನದ ಹಿಂದಿನವರೆಗೂ ಆತನನ್ನು ಮ್ಯಾನೇಜರ್ ಎಂದೇ ಇಡಿ ಪರಿಗಣಿಸಿತ್ತು. ಈಗ ಮಾಲೀಕ ಹೇಗಾದ? ಈ ಕುತಂತ್ರ ಜನರಿಗೆ ಅರ್ಥವಾಗುತ್ತದೆ. ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ.
Advertisement
ಬಿಜೆಪಿ ನವೆಂಬರ್ 17 ರವರೆಗೆ ಈ ವಿಷಯವನ್ನು ಇಟ್ಟುಕೊಂಡು ಸಂಭ್ರಮಿಸಲಿ. ಇಲ್ಲಿ ಬಿಜೆಪಿ ಇಡಿ ಮತ್ತು ಐಟಿಯನ್ನು ಬಳಸಿಕೊಂಡು ಸ್ಪರ್ಧೆ ಮಾಡುತ್ತಿದೆ ಎಂದು ಸಿಎಂ ಕಿಡಿಕಾರಿದ್ದಾರೆ.
ಛತ್ತೀಸ್‌ಗಢದಲ್ಲಿ ನವೆಂಬರ್ 7 ಹಾಗೂ ನವೆಂಬರ್ 17ರಂದು ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ ಸರ್ಕಾರದ ಕ್ರಮ – ರಿಯಾಯಿತಿ ದರದಲ್ಲಿ ಭಾರತ್ ಅಟ್ಟಾ ಮಾರಾಟ. 1 ಕೆಜಿ ಗೋಧಿ ಹಿಟ್ಟು ಬೆಲೆ ಎಷ್ಟು?
ಏನಿದು ಪ್ರಕರಣ?
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ಖರ್ಚು ಮಾಡಿ ವಿವಾಹ ನಡೆಸಿದ್ದರು. ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಟುಂಬ ಸದಸ್ಯರಿಗೆ ಖಾಸಗಿ ಜೆಟ್ ವಿಮಾನವನ್ನು ಬುಕ್ ಮಾಡಲಾಗಿತ್ತು. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗ ತನಿಖೆ ನಡೆಸುತ್ತಿದೆ.