ಚಾಮರಾಜನಗರ: ಪ್ರತಿ ತಿಂಗಳು ಹುಂಡಿಯಲ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿರುವ ಮಲೆ ಮಹದೇಶ್ವರನಿಗೆ ಈ ಬಾರಿಯ ಶಿವರಾತ್ರಿಯ ಜಾತ್ರೆಯಲ್ಲಿ ಲಾಡು ಮಾರಾಟದಿಂದಲೂ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ.
ಈ ಬಾರಿಯ ಶಿವರಾತ್ರಿ ಜಾತ್ರೆಯಲ್ಲಿ ವಿವಿಧ ಸೇವೆಗಳು ಸೇರಿದಂತೆ 6 ಲಕ್ಷದ 20 ಸಾವಿರದ ಐದುನೂರು (6,20,500) ಲಾಡುಗಳು ಖರ್ಚಾಗಿವೆ. ಕೌಂಟರ್‌ಗಳಲ್ಲೇ ಐದು ಲಕ್ಷದ ಎರಡೂವರೆ ಸಾವಿರ ಲಾಡು ಮಾರಾಟವಾಗಿದೆ.
Advertisement
Advertisement
ಇದರಿಂದ ಈ ಬಾರಿ ಲಾಡು ಮಾರಾಟದಿಂದ ಒಂದು ಕೋಟಿ ಐವತ್ತು ಸಾವಿರ ರೂಪಾಯಿ (1.50 ಕೋಟಿ) ಆದಾಯ ಬಂದಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.
Advertisement
ಜಾತ್ರೆಯ ವಿಶೇಷವಾಗಿ ಈ ಬಾರಿ ತಯಾರಿಸಿದ್ದ ಲಾಡುಗಳಲ್ಲಿ ವಿವಿಧ ಸೇವೆಗಳನ್ನು ಮಾಡಿಸಿದವರಿಗೆ 23,000 ಸಾವಿರ ಲಾಡುಗಳನ್ನು ಹಾಗೂ ಉತ್ಸವ ಮಾಡಿಸಿದವರಿಗೆ 65 ಸಾವಿರ ಲಾಡುಗಳನ್ನು ಪ್ರಸಾದವಾಗಿ ನೀಡಲಾಗಿದೆ.