ಮಹದೇಶ್ವರಬೆಟ್ಟದಲ್ಲಿ ಮೂರೇ ದಿನದಲ್ಲಿ ಕೋಟಿ ದಾಟಿದ ಹಣ

Public TV
1 Min Read
Male Mahadeshwara Temple drone 2 1

ಚಾಮರಾಜನಗರ: ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಸ್ಥಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಲೆಮಹದೇಶ್ವರಬೆಟ್ಟದ ಹುಂಡಿಯಲ್ಲಿ ಮೂರೇ ದಿನದಲ್ಲಿ 1.44 ಕೋಟಿ ರೂಪಾಯಿ ಹಣ ಸಂಗ್ರವಾಗಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಮೂರು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರಬೆಟ್ಟದಲ್ಲಿ ನಡೆದ ದೊಡ್ಡ ರಥೋತ್ಸವ ಜಾತ್ರೆಯ ವೇಳೆ ಭಕ್ತರಿಂದ ಇಷ್ಟು ಮೊತ್ತದ ಹಣ ಸಂಗ್ರಹವಾಗಿದೆ.

mm hills

ವರ್ಷದಿಂದ ವರ್ಷಕ್ಕೆ ಜಾತ್ರಾ ಮಹೋತ್ಸವದ ವೇಳೆ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರವಾಗುತ್ತಿತ್ತು. ಈ ಮೂಲಕ ಮಾದಪ್ಪನ ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಮೂರು ದಿನದ ಅವಧಿಯಲ್ಲಿ 2.42 ಲಕ್ಷದಷ್ಟು ಲಡ್ಡುಗಳನ್ನು ಭಕ್ತರು ತೆಗೆದುಕೊಂಡಿದ್ದಾರೆ.

ದೀಪಾವಳಿ ಜಾತ್ರೆಗೆಂದು ಮಾದಪ್ಪನ ಬೆಟ್ಟದಲ್ಲಿ 2.50 ಲಕ್ಷ ಲಡ್ಡುಗಳನ್ನು ತಯಾರು ಮಾಡಲಾಗಿತ್ತು. ಲಡ್ಡು ಮಾರಾಟ, ಚಿನ್ನದ ರಥ, ಹುಲಿ ವಾಹನ, ಬಸವ ವಾಹನ ರಥ, ಲಾಡ್ಜಿಂಗ್ ಮತ್ತು ದರ್ಶನ ವೆಚ್ಚ ಸೇರಿದಂತೆ ಇನ್ನಿತರ ಸೇವೆಗಳ ಮೂಲಕ ಮಾದಪ್ಪನ ಸನ್ನಿಧಿಗೆ ಮೂರು ದಿನಗಳ ಅವಧಿಯಲ್ಲಿ ದಾಖಲೆಯ 1.44 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

mm hills 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *