ಬೆಳಗಾವಿ: ಮಹದಾಯಿ ವಿಚಾರದಲ್ಲಿ ಕರ್ನಾಟಕದ (Karnataka) ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಗೋವಾ ಸಿಎಂ (Goa CM) ಪ್ರಮೋದ್ ಸಾವಂತ್‌ಗೆ (Pramod Sawant) ತೀವ್ರ ಮುಖಭಂಗವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಮಹದಾಯಿ ಜಲಾನಯನ ಪ್ರದೇಶದಲ್ಲಿ ಯಾವುದೇ ರೀತಿಯ ಅನುಮತಿ ಇಲ್ಲದೇ ಕರ್ನಾಟಕ ಮಹಾದಾಯಿ ಯೋಜನೆ (Mahadayi Project) ಕಾಮಗಾರಿ ಆರಂಭಿಸಿದೆ ಎಂದು ಪ್ರಮೋದ್ ಸಾವಂತ್ ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಪ್ರಮೋದ್ ಸಾವಂತ್ ಆರೋಪದ ಬೆನ್ನಲ್ಲೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕೇಂದ್ರದ ತಂಡ ಭೇಟಿ ವೇಳೆ ಕರ್ನಾಟಕವನ್ನು ಕೃತ್ಯ ಬಯಲಾಗಲಿದೆ ಎಂದು ಪ್ರಮೋದ್ ಸಾವಂತ್ ಹೇಳಿದ್ದರು.
ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಮಹಾದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ ನೀಡಿದೆ. ಈ ವೇಳೆ ಕಾಮಗಾರಿ ನಡೆಯದೇ ಇರುವುದು ದೃಢವಾಗಿದೆ.
ಮೊದಲಿನಿಂದಲೂ ಮಹಾದಾಯಿ ಯೋಜನೆ ಜಾರಿಗೆ ಗೋವಾ ಪದೇ ಪದೇ ಅಡ್ಡಗಾಲು ಹಾಕುತ್ತಾ ಬಂದಿದೆ. ಮಹದಾಯಿ ನ್ಯಾಯಧೀಕರಣ, ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ಜಾರಿಯಾಗುತ್ತಿಲ್ಲ.
ಕೇಂದ್ರ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಇಲಾಖೆ ಅನುಮತಿಗೂ ಗೋವಾ ಸರ್ಕಾರ ಅಡ್ಡಗಾಲು ಹಾಕುತ್ತಿದ್ದು ಮಹದಾಯಿ ಜಾರಿ ವಿರುದ್ಧ ಗೋವಾ ಕುತಂತ್ರಕ್ಕೆ ಕರ್ನಾಟಕದ ಜನಪ್ರತಿನಿಧಿಗಳು ತಿರುಗೇಟು ನೀಡುವ ಪ್ರಯತ್ನ ಮಾಡಬೇಕಿದೆ. ಐದು ದಶಕಗಳ ಕಾಲ ಹೋರಾಟ ಮಾಡಿದರೂ ಮಲಪ್ರಭಾ ನದಿ ಪಾತ್ರದ ಜನರಿಗೆ ಹನಿ ನೀರು ಸಿಗುತ್ತಿಲ್ಲ.