ಬೆಂಗಳೂರು: ಮಹದಾಯಿ ನದಿಯ ನೀರನ್ನು ನೀಡದೇ ರಾಜ್ಯದ ರೈತರಿಗೆ ಅನ್ಯಾಯ ಎಸಗುತ್ತಿರುವ ಗೋವಾಗೆ ಪಾಠ ಕಲಿಸಲು ಎಪಿಎಂಸಿ ನೌಕರರು ಈಗ ಮುಂದಾಗಿದ್ದಾರೆ.
ಆಗಸ್ಟ್ 12 ರಂದು ಸಾಂಕೇತಿಕ ಪ್ರತಿಭಟನೆ ಶುರುವಾಗಲಿದ್ದು, ಅಂದು ಗೋವಾಗೆ ಅಕ್ಕಿ, ಧಾನ್ಯ, ತರಕಾರಿ ಈರುಳ್ಳಿ, ಆಲೂಗಡ್ಡೆ ಸರಬರಾಜು ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ ಎಂದು ಎಪಿಎಂಸಿ ನೌಕರರ ಸಂಘದ ಅಧ್ಯಕ್ಷ ಪರಮೇಶ್ ಹೇಳಿದ್ದಾರೆ.
Advertisement
ಗೋವಾಗೆ ಶೇ.60 ಆಹಾರ ಧಾನ್ಯ ತರಕಾರಿ ಕರ್ನಾಟಕದಿಂದಲೇ ಸರಬರಾಜು ಆಗುತ್ತದೆ. ಗೋವಾ ಜಾಸ್ತಿ ಸತಾಯಿಸಿದರೆ ಸಂಪೂರ್ಣವಾಗಿ ಆಹಾರ ಧಾನ್ಯಗಳ ಸರಬರಾಜು ನಿಲ್ಲಿಸಲಾಗುತ್ತದೆ ಎಂದು ಅವರು ಗೋವಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಎಪಿಎಂಸಿಯಿಂದ ಪ್ರತಿದಿನ 7 ರಿಂದ 8 ಟನ್ ಅಕ್ಕಿ ಸರಬರಾಜು ಆಗುತ್ತದೆ. ಗೋವಾಗೆ ಶೇ.64 ಆಹಾರ ಧಾನ್ಯ ತರಕಾರಿ ಕರ್ನಾಟಕದಿಂದಲೇ ಸರಬರಾಜು ಆಗತ್ತದೆ. ನಾವು ಸರಬರಾಜು ನಿಲ್ಲಿಸಿದರೆ ಗೋವಾದರು ಮಹಾರಾಷ್ಟ್ರದಿಂದ ಆಹಾರ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಖರೀದಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
Advertisement
Advertisement
https://www.youtube.com/watch?v=sfFTK_Os4n4