ಕೋಲ್ಕತ್ತಾ: ರಾಕೇಶ್ ರೋಷನ್ ಪ್ರಮಾದದ ಬೆನ್ನಲ್ಲೇ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಹಾಭಾರತವನ್ನು (Mahabharat) ಪೂಜ್ಯ ಋಷಿ ವೇದವ್ಯಾಸರಿಂದ ಬರೆಯಲಾಗಿಲ್ಲ, ಇದನ್ನು ಬಂಡಾಯ ಕವಿ ಕಾಜಿ ನಜ್ರುಲ್ ಇಸ್ಲಾಂ (Kazi Nazrul Islam) ಬರೆದಿದ್ದಾರೆ ಎಂದು ಹೇಳಿದ್ದಾರೆ. ಇವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಕಾಜಿ ನಜ್ರುಲ್ ಇಸ್ಲಾಂ ಬಂಗಾಳದ ಬಂಡಾಯ ಬಾರ್ಡ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತಾರೆ. ಇವರು ವಸಾಹತುಶಾಹಿ ವಿರೋಧಿ ಕವಿತೆಗಳು ಮತ್ತು ಕೋಮು ಸೌಹಾರ್ದವನ್ನು ಉತ್ತೇಜಿಸುವ ಸಾಹಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮಮತಾ ಬ್ಯಾನರ್ಜಿ ಮಹಾಭಾರತವನ್ನು ಕಾಜಿ ನಜ್ರುಲ್ ಅವರು ಬರೆದಿದ್ದರೂ ಇದರ ಕ್ರೆಡಿಟ್ ವೇದವ್ಯಾಸರಿಗೆ ಸಲ್ಲುತ್ತದೆ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: 2024ಕ್ಕೆ ಮತ್ತೆ ಬರ್ತೀನಿ – ಹವಾ ಎಬ್ಬಿಸಿದ ಮೋದಿ ಟರ್ಮಿನೇಟರ್ ಪೋಸ್ಟರ್
ಟಿಎಂಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧ್ಯಯನಗಳು ಒಬ್ಬ ವ್ಯಕ್ತಿಯನ್ನು ನಿಜವಾದ ಅರ್ಥದಲ್ಲಿ ಕಲಿಯುವಂತೆ ಮಾಡುವುದಿಲ್ಲ. ಒಬ್ಬ ವ್ಯಕ್ತಿ ವಿಶಾಲವಾದ ಹೃದಯವನ್ನು ಹೊಂದಿರಬೇಕು. ನಮ್ಮ ಮಹಾಪುರುಷರು ಬರೆದದ್ದನ್ನು ಓದಿ ಮತ್ತು ಅರ್ಥಮಾಡಿಕೊಳ್ಳಿ. ರವೀಂದ್ರನಾಥ, ನಜ್ರುಲ್ ಮತ್ತು ವಿವೇಕಾನಂದರ ಬಗ್ಗೆ ಓದಿ. ಮಹಾಭಾರತವನ್ನು ಬರೆದವರು ನಜ್ರುಲ್ ಇಸ್ಲಾಂ ಎಂದರು. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್
ಈ ಹಿಂದೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಚಂದ್ರನಲ್ಲಿಗೆ ಹೋಗಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಇಂದಿರಾ ಗಾಂಧಿ ಚಂದ್ರನಲ್ಲಿಗೆ ಹೋದಾಗ ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ರಾಕೇಶ್ ಶರ್ಮಾ ಅವರನ್ನು ಕೇಳಿದ್ದಾರೆ. ಇದಕ್ಕೆ ರಾಕೇಶ್ ರೋಷನ್ ಸಾರೇ ಜಹಾಂ ಸೇ ಅಚ್ಚಾ ಎಂದು ಉತ್ತರಿಸಿದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟು ಮಾತ್ರವಲ್ಲದೇ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಎಂದು ತಪ್ಪಾಗಿ ಹೇಳಿ ಎಲ್ಲರನ್ನೂ ಗೊಂದಲಕ್ಕೀಡುಮಾಡಿದ್ದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]