ನವದೆಹಲಿ: ಕೊರೊನಾ ವೈರಸ್ ಅಟ್ಟಹಾಸದ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಆಯ್ದ ಪ್ರಜೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಮಹಾಭಾರತ ಯುದ್ಧ 18 ದಿನಗಳು ನಡೆಯಿತು. ಆದ್ರೆ ಕೊರೊನಾ ವೈರಸ್ ವಿರುದ್ಧ ದೇಶ ಯುದ್ಧ ಮಾಡಿ ಜಯಗಳಿಸಲು 21 ದಿನಗಳು ಬೇಕಾಗುತ್ತೆ ಎಂದು ದೇಶದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
Mahabharat war was won in 18 days, this war the whole country is fighting against #corona will take 21 days. Our aim is to win this war in 21 days: Prime Minister Narendra Modi pic.twitter.com/pWhShpRXrh
— ANI (@ANI) March 25, 2020
Advertisement
ಭಾರತದಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬಳಿಕ ಮೋದಿ ಅವರು ನಡೆಸುತ್ತಿರುವ ಮೊದಲ ವಿಡಿಯೋ ಕಾನ್ಫರೆನ್ಸ್ ಇದಾಗಿದ್ದು, ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದರು. ಮಹಾಭಾರತ ಯುದ್ಧ 18 ದಿನ ನಡೆಯಿತು, ಆದರೆ ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಸಮರ 12 ದಿನ ನಡೆಯಬೇಕಿದೆ. ಈ ಯುದ್ಧದಲ್ಲಿ ದೇಶವನ್ನ ಗೆಲ್ಲಿಸೋದೇ ನಮ್ಮ ಗುರಿ ಎಂದು ಪ್ರಧಾನಿ ಹೇಳಿದರು.
Advertisement
At times, ppl don't pay attention to things which are important. The same is happening in India. I request ppl to understand facts¬ believe in rumours. #COVID19 doesn't discriminate b/w rich&poor; it'll not spare anyone just because they perform yoga or exercise daily: PM pic.twitter.com/hfbEevlepx
— ANI (@ANI) March 25, 2020
Advertisement
ಅಷ್ಟೇ ಅಲ್ಲದೇ ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ. ಕೊರೊನಾ ವೈರಸ್ ಶ್ರೀಮಂತ, ಬಡವ ಎಂದು ನೋಡುವುದಿಲ್ಲ. ದಯಮಾಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಮೋದಿ ಅವರು ಮನವಿ ಮಾಡಿಕೊಂಡರು.
Advertisement
PM: Today is the first day of Navratri, you all must be busy in performing rituals & offering prayers, but still you took out time for this interaction, I'm grateful to all of you. I pray to Goddess Shailputri to give us the strength to fight country's battle against #Coronavirus pic.twitter.com/gzsWuWRAof
— ANI (@ANI) March 25, 2020
ಹಾಗೆಯೇ ವಾಟ್ಸಪ್ ಸಹಯೋಗದೊಂದಿಗೆ ಸರ್ಕಾರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೂಲಕ ಕೊರೊನಾ ವೈರಸ್ ಬಗ್ಗೆ ಸರಿಯಾದ ಮಾಹಿತಿ ಪಡೆಯುವಲ್ಲಿ ಜನರಿಗೆ ಸಹಕಾರಿಯಾಗಲಿದೆ. 9013151515 ಈ ನಂಬರ್ ಗೆ ‘ನಮಸ್ತೆ’ ಎಂದು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ವಾಟ್ಸಪ್ ಮಾಡಿದರೆ ನಿಮಗೆ ತಕ್ಷಣ ಪ್ರತಿಕ್ರಿಯಿಸಲಾಗುತ್ತದೆ. ಆಗ ಕೊರೊನಾ ವೈರಸ್ ಬಗ್ಗೆ ಇರುವ ಗೊಂದಲ, ಮಾಹಿತಿಗಳನ್ನು ವಾಟ್ಸಪ್ ಮೂಲಕವೇ ಪಡೆಯಬಹುದು ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮತರಾರರಿಗೆ ಮೋದಿ ಅವರು ತಿಳಿಸಿದರು.
If you write 'Namaste' on this WhatsApp number, either in English or in Hindi, then you will get an immediate response: PM Narendra Modi on interaction with citizens of Varanasi (via video conferencing) https://t.co/CJM1KzwOkI
— ANI (@ANI) March 25, 2020