ಮಹಾಬಲಿಪುರಂನಲ್ಲಿ ವಿಶ್ವದ ಮಹಾನ್ ನಾಯಕರ ಸಂಗಮ

Public TV
1 Min Read
Modi

ಚೆನ್ನೈ: ಅಮೆರಿಕದಲ್ಲಿ ಕಳೆದ ತಿಂಗಳು ಡೊನಾಲ್ಡ್ ಟ್ರಂಪ್ ಜೊತೆ ಸೇರಿ ಹೌಡಿ ಮೋದಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಗೆ ಸ್ನೇಹ ಹಸ್ತ ಚಾಚಿದ್ದಾರೆ.

ತಮಿಳುನಾಡಿನ ಸಾಂಪ್ರದಾಯಿಕ ಧರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದರು. ಜೊತೆಯಲ್ಲೇ ಎಳನೀರು ಕುಡಿದರು. ಇದನ್ನೂ ಓದಿ: ಪಂಚೆ, ಶರ್ಟಿನಲ್ಲಿ ಮಿಂಚಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಜಿನ್‍ಪಿಂಗ್ ಅವರೊಂದಿಗೆ ಸಮುದ್ರ ತೀರದಲ್ಲಿ ವಿಹರಿಸಿದರು. ಈ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು. ನಂತರ ಜಿನ್‍ಪಿಂಗ್ ಪ್ರವಾಸದ ಗೌರವಾರ್ಥ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಚೆಟ್ಟಿನಾಡ್, ಕರೈಕುಡಿಯ ಸಾಂಪ್ರದಾಯಿಕ ತಿನಿಸುಗಳನ್ನು ಚೀನಾ ಅಧ್ಯಕ್ಷರಿಗೆ ಉಣಬಡಿಸಲಾಯಿತು.

ಇದಕ್ಕೂ ಮುನ್ನ ಶುಕ್ರವಾರ ಮಧ್ಯಾಹ್ನ 1.45ಕ್ಕೆ ಚೆನ್ನೈಗೆ ಬಂದಿಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಶನಿವಾರ ಬೆಳಗ್ಗೆ ಇಬ್ಬರು ವಿಶ್ವ ದಿಗ್ಗಜರ ನಡುವೆ ಸಭೆ ನಡೆಯಲಿದೆ. ಈ ವೇಳೆ ಭಯೋತ್ಪಾದನೆ ದಮನ, ರಕ್ಷಣಾ ವ್ಯವಹಾರ, ಗಡಿ ವಿವಾದದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಈ ನಡುವೆ ಚೀನಾ ಆಕ್ರಮಿಸಿರುವ ಪಿಓಕೆಯ 5,000 ಕಿಲೋಮೀಟರ್ ಭೂಭಾಗವನ್ನು ಬಿಟ್ಟು ತೆರಳುವಂತೆ ಕ್ಸಿ ಜಿನ್‍ಪಿಂಗ್‍ರನ್ನು ಪ್ರಧಾನಿ ಮೋದಿ ಆಗ್ರಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *