ಮಹಾಶಿವರಾತ್ರಿ ಆಚರಣೆಗೆ ದೇಶದ ಎಲ್ಲೆಡೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಶಿವರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಸಿಹಿಯಾದ ತಂಬಿಟ್ಟು ಮಾಡಿ ಶಿವನಿಗೆ ಅರ್ಪಿಸುವ ಆಚರಣೆಯಿದೆ. ತಂಬಿಟ್ಟು ಶಿವನಿಗೆ ಅತ್ಯಂತ ಶ್ರೇಷ್ಠ ಮತ್ತು ಪ್ರಿಯವಾದ ಆಹಾರ ಎನ್ನಲಾಗಿದೆ. ಹೀಗಾಗಿ ಶಿವನಿಗೆ ಆರತಿ ಮಾಡುವ ಸಮಯದಲ್ಲಿ ತಂಬಿಟ್ಟು ಇಟ್ಟು ನೈವೇದ್ಯ ಮಾಡಿ ಬಳಿಕ ಅದನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಹಾಗಿದ್ರೆ ಸುಲಭವಾಗಿ ತಂಬಿಟ್ಟು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಹುರಿಗಡಲೆ – 1 ಕಪ್
ಒಣ ತೆಂಗಿನಕಾಯಿ ತುರಿ – 1/2 ಕಪ್
ಬೆಲ್ಲ – 3/4 ಕಪ್
ತುಪ್ಪ – 1/4 ಕಪ್
ಗಸಗಸೆ ಬೀಜಗಳು – 1 ಚಮಚ
ಏಲಕ್ಕಿಪುಡಿ – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಿಕ್ಸಿ ಜಾರಿನಲ್ಲಿ ಹುರಿಗಡಲೆ ಹಾಗೂ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ನಂತರ ಹುರಿಯಲು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಗಸಗಸೆ ಬೀಜಗಳನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದು ಪಕ್ಕಕ್ಕೆ ಇರಿಸಿ.
* ಆ ಬಳಿಕ ಅದೇ ಬಾಣಲೆಗೆ ಒಣ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು, ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ವರ್ಗಾಯಿಸಿ ಒರಟಾಗಿ ರುಬ್ಬಿಕೊಳ್ಳಿ.
* ನಂತರ ಬಾಣಲೆಯಲ್ಲಿ 1/4 ಕಪ್ ತುಪ್ಪವನ್ನು ತೆಗೆದುಕೊಂಡು, ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ. ಬೆಲ್ಲವು ಕರಗುವಂತೆ ಚೆನ್ನಾಗಿ ಬೆರೆಸಿಕೊಳ್ಳಿ.
* ಈ ಬಾಣಲೆಗೆ ಈಗಾಗಲೇ ರುಬ್ಬಿದ ತೆಂಗಿನಕಾಯಿ ಸೇರಿಸಿಕೊಂಡು, ಗಸಗಸೆ ಹಾಗೂ ಹುರಿಗಡಲೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
* ತುಪ್ಪ ಕಡಿಮೆಯೆಂದೆನಿಸಿದ್ದಲ್ಲಿ ಒಂದೆರಡು ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ.
* ಈಗ ಹುರಿಗಡಲೆ ತಂಬಿಟ್ಟು ಉಂಡೆ ಸವಿಯಲು ಸಿದ್ಧ.
Advertisement