– ಪುಣ್ಯ ಸ್ನಾನ ನಡೆವಾಗ ರಾಜಕೀಯ ನಡಿತಿದೆ
ಮೈಸೂರು: ಮಹಾ ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ (Prakash Raj) ಸ್ನಾನ ಮಾಡುತ್ತಿರುವ ರೀತಿಯ ಫೇಕ್ ಫೋಟೊ ವೈರಲ್ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ (Prashanth Sambargi) ವಿರುದ್ಧ ಮೈಸೂರಿನಲ್ಲಿ (Mysuru) ಎಫ್‌ಐಆರ್ ದಾಖಲಾಗಿದೆ.
Advertisement
Advertisement
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ನೀಡಿದ ದೂರಿನ ಅಡಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಂಭಮೇಳದ ಪುಣ್ಯ ಸ್ನಾನ ದೇಶದಲ್ಲಿ ನಡೆಯುತ್ತಿದೆ. ಹಿಂದೂ ಧರ್ಮದವರಿಗೆ ಹಾಗೂ ದೇವರನ್ನ ನಂಬುವವರಿಗೆ ಅದು ಪುಣ್ಯವಾದ ಸ್ಥಳ. ಈಗ ಎಐ ಆ್ಯಪ್ ಬಳಿಸಿ ಪ್ರಕಾಶ್ ರೈ ಕುಂಭಮೇಳದಲ್ಲಿ ಸ್ನಾನ ಮಾಡಿದ್ರಾ? ಎಂದು ಫೋಟೊ ವೈರಲ್ ಮಾಡುತ್ತಿದ್ದಾರೆ. ಅಂತಹ ಪುಣ್ಯದ ಸ್ನಾನ ನಡೆಯಬೇಕದಾರೆ ಅದರಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ಮೊದಲಿನಿಂದಲೂ ಪ್ರಕಾಶ್ ರೈ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ್ ಸಂಬರ್ಗಿ ಪ್ರಖ್ಯಾತರೋ? ಕುಖ್ಯಾತರೊ? ನನಗೆ ಗೊತ್ತಿಲ್ಲ. ದೇಶದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ. ಧ್ವೇಷವನ್ನು ಹರಡುತ್ತಿದ್ದಾರೆ. ಇವರು ನಿಜವಾದ ಧರ್ಮದವರಲ್ಲ. ಜನರ ನಂಬಿಕೆಗೆ ಅಘಾತ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ. ಹೀಗಾಗಿ ನಾನು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿ ಎಫ್ಐಆರ್ ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಬೇಕು ಎಂದಿದ್ದಾರೆ.