– 38.76 ಲಕ್ಷ ಕೋಟಿ ಆದಾಯ ಸಂಗ್ರಹ
ಪ್ರಯಾಗ್‌ರಾಜ್: ಮಹಾಕುಂಭಮೇಳದಿಂದಾಗಿ (Maha Kumbh Mela) ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಭಾರೀ ಆದಾಯ ಗಳಿಸಿದೆ. ಒಂದು ವರ್ಷಕ್ಕೆ ಸಂಗ್ರಹವಾಗಬಹುದಾದ ಆದಾಯ ಕಳೆದ 45 ದಿನಗಳಲ್ಲಿ ಗಳಿಸಿದೆ.
ಕುಂಭಮೇಳದ ಕೇವಲ 45 ದಿನಗಳಲ್ಲಿ ವಾರಣಾಸಿ ವಿಭಾಗದಿಂದ 29.02 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಇದರಿಂದಾಗಿ 38 ಕೋಟಿ 76 ಲಕ್ಷ ರೂ. ಆದಾಯಗಳಿಸಿದೆ. ಇದರಲ್ಲಿ ಗ್ರಾಮೀಣ ಡಿಪೋ ಅತಿ ಹೆಚ್ಚು ಅದಾಯ ಸಂಗ್ರಹಿಸಿವೆ. ಇದನ್ನೂ ಓದಿ: ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ
2024ರ ವಾರ್ಷಿಕ ಆದಾಯ 30 ಕೋಟಿ 76 ಲಕ್ಷ 22 ಸಾವಿರ ರೂ. ಗಳಷ್ಟಿತ್ತು ಎಂದು ರೋಡ್‌ವೇಸ್ ವಾರಣಾಸಿ (Varanasi) ಪ್ರದೇಶದ ಪ್ರಾದೇಶಿಕ ವ್ಯವಸ್ಥಾಪಕ ಪರಶುರಾಮ್ ಪಾಂಡೆ ತಿಳಿಸಿದ್ದಾರೆ. ಈ ಮಹಾಕುಂಭ ಮೇಳದ ಕೇವಲ 45 ದಿನಗಳಲ್ಲಿ 38 ಕೋಟಿ 76 ಲಕ್ಷ ರೂಪಾಯಿ ಆದಾಯ ಬಂದಿದೆ.
2024 ರಲ್ಲಿ 24 ಲಕ್ಷ 42 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದರು. ಈ ಮಹಾ ಕುಂಭಮೇಳ ಅವಧಿಯಲ್ಲಿ 29.02 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ವಾರಣಾಸಿ ಗ್ರಾಮೀಣ ಡಿಪೋದಿಂದ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಅಂದರೆ 5.50 ಲಕ್ಷ ಪ್ರಯಾಣಿಸಿದ್ದಾರೆ ಇದರಿಂದ ಆದಾಯ 7.41 ಕೋಟಿ ರೂ ಬಂದಿತ್ತು. ಇದನ್ನೂ ಓದಿ: ಮಂಡ್ಯ ವಿವಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ – ಬಿಜೆಪಿ, ಜೆಡಿಎಸ್ ಪ್ರತಿಭಟನೆ
ಕ್ಯಾಂಟ್ ಡಿಪೋ 3.23 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು 5.13 ಕೋಟಿ ರೂ. ಆದಾಯ ಗಳಿಸಿದೆ. ಕಾಶಿ ಡಿಪೋ 3.40 ಲಕ್ಷ ಪ್ರಯಾಣಿಕರನ್ನು ಸಾಗಿಸಿ 5.81 ಕೋಟಿ ರೂ. ಆದಾಯ ಗಳಿಸಿದೆ. ಇದರೊಂದಿಗೆ ಚಂದೌಲಿ ಡಿಪೋದ ಆದಾಯ 2.45 ಕೋಟಿ ರೂ.ಗಳಾಗಿದ್ದು, 1.86 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಮನೆ ಮುಂದಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ – ಭಯಭೀತರಾದ ಗ್ರಾಮಸ್ಥರು
ಘಾಜಿಪುರ ಡಿಪೋದಿಂದ 3.14 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, 4.55 ಕೋಟಿ ರೂ. ಆದಾಯ ಗಳಿಸಿದೆ. ಜೌನ್‌ಪುರದ ಆದಾಯ 5.63 ಕೋಟಿ ರೂ.ಗಳಾಗಿದ್ದು, 5.33 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಸೋನಭದ್ರ ಡಿಪೋದಿಂದ 3.41 ಲಕ್ಷ ಪ್ರಯಾಣಿಕರ ಸಂಚಾರ ಮಾಡಿದ್ದು 4.37 ಕೋಟಿ ರೂ. ಆದಾಯ ಬಂದಿದೆ. ವಿಂಧ್ಯನಗರ ಡಿಪೋದ ಆದಾಯ 3.39 ಕೋಟಿ ರೂ.ಗಳಾಗಿದ್ದು, 2.15 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.