ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು

Public TV
2 Min Read
MANDYA KUMBAMELA

ಮಂಡ್ಯ: ಪವಾಡ ಪುರಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳವದಾ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭ ಮೇಳ (Maha Kumbh Mela) ಮೇಳೈಸುತ್ತಿದೆ. ಇಂದು ರಾತ್ರಿ ನಡೆದ ಗಂಗಾ ಆರತಿ (Gangarathi) ಹಾಗೂ ಲೇಸರ್ ಲೈಟ್ ಶೋ ಭಕ್ತರನ್ನು ಮನಸೂರೆಗೊಳಿಸಿದೆ.

MANDYA KUMBAMELA 2

ಕಳೆದ ಎರಡು ದಿನಗಳಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಅದ್ರಲ್ಲೂ ಇಂದು ತ್ರಿವೇಣಿ ಸಂಗಮದ ದಡದಲ್ಲಿ ನಡೆದ ಕಾಶಿ ಮಾದರಿಯ ಗಂಗಾರತಿ ಭಕ್ತರ ಮನಸ್ಸಿನಲ್ಲಿ ಭಕ್ತಿ ಸುದೆಯನ್ನು ಹರಿಸಿತು. ವಾರಾಣಸಿ ಮೂಲದ ರಣದೀರ್ ಪಾಂಡೆ ನೇತೃತ್ವದ 7 ಮಂದಿಯ ತಂಡ ನಾಗಾರತಿ ಹಾಗೂ ಗಂಗಾರತಿಯನ್ನು ನೆರವೇರಿಸಿ ಕೊಟ್ಟರು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮೇಳೈಸಿದ ಮಹಾ ಕುಂಭಮೇಳ – ದೇಗುಲ ಲೋಕಾರ್ಪಣೆಗೊಳಿಸಿದ ಡಾ.ವೀರೇಂದ್ರ ಹೆಗ್ಗಡೆ

Mandya Kumbh Mela 2

ಇದಕ್ಕೂ ಮುನ್ನ ನಡೆದ ನೀರಿನ ಲೇಸರ್ ಶೋ ಅಂತು ನೋಡುಗರನ್ನು ಇಮ್ಮಡಿಗೊಳಿತು. ಒಂದು ಬಾರಿ ಧಾರ್ಮಿಕ ಹಿನ್ನೆಲೆ, ಇನ್ನೊಂದು ದೈವಿಕ ಅಂಶದ ವರ್ಣನೆ, ಮಗದೊಮ್ಮೆ ನಮ್ಮ ದೇಶದ ಇತಿಹಾಸವನ್ನು ಸಂಗೀತದ ಜೊತೆ ಜೊತೆಗೆ ನೀರಿನ ಮೇಲೆ ಲೇಸರ್ ಬಿಟ್ಟು ಜನರನ್ನು ಆಕರ್ಷಿಸಲಾಯಿತು. ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಲೇಸರ್ ಶೋ ಜನರಲ್ಲಿ ಅಪ್ಪುವಿನ ನೆನಪನ್ನು ಮರುಕಳಿಸುವಂತೆ ಮಾಡಿತು. ಇದನ್ನೂ ಓದಿ: ರಾಜಧಾನಿಯಲ್ಲಿ ಧಾರಾಕಾರ ಮಳೆ – ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರ ಪರದಾಟ

MANDYA KUMBAMELA 3

ಶನಿವಾರ ಕುಂಭ ಮೇಳದ ಮೂರನೇ ದಿನವಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಲಿವೆ. 11 ಗಂಟೆಗೆ ಧಾರ್ಮಿಕ ಸಮ್ಮೇಳನ ಜರುಗಲಿದ್ದು, ಇದ್ರಲ್ಲಿ ರಾಜ್ಯವಲ್ಲದೇ ದೇಶದ ನಾನಾ ಮೂಲೆಳಿಂದ ಸ್ವಾಮೀಜಿಗಳು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಧರ್ಮದ ವಿಚಾರಗಳನ್ನು ಜನರಿಗೆ ಸಾರಲಿದ್ದಾರೆ. ಸಂಜೆ 4 ಗಂಟೆಗೆ ಮಲೆ ಮಹದೇಶ್ವರರ ಚರಿತ್ರೆ ಕುರಿತು ನಾಟಕ ನಡೆಯಲಿದ್ದು, ಸಂಜೆ 7 ಗಂಟೆಗೆ ನಾಳೆಯೂ ಸಹ ವಿಭಿನ್ನವಾದ ಲೇಸರ್ ಶೋ ಹಾಗೂ ಗಂಗಾರತಿಯನ್ನು ಆಯೋಜನೆ ಮಾಡಲಾಗಿದೆ. ಒಟ್ಟಾರೆ ಪವಾಡ ಪುರುಷರು ನಡೆಸಿದ ಪವಾಡ ಸ್ಥಳದಲ್ಲಿ ತ್ರೀವೇಣಿ ಸಂಗಮದಲ್ಲಿ ಕುಂಭ ಮೇಳೆ ಸಂಭ್ರಮ ಮನೆ ಮಾಡುತ್ತಿದೆ. ಈ ಸಂಭ್ರಮದಲ್ಲಿ ಲಕ್ಷಾಂತರ ಜನರ ಪಾಲ್ಗೊಂಡು ಮಾದಪ್ಪನಿಗೆ ಉಘೇ ಉಘೇ ಎನ್ನುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *