ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ಮಹಾಪ್ರಸಾದ ಸೇವೆ ನೀಡುತ್ತಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯವರು (Gautam Adani), ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸಲು ನಮಗೆ ಇದು ಸದಾವಕಾಶ ಎಂದು ಹೇಳಿಕೊಂಡಿದ್ದಾರೆ.
महाकुम्भ के दिव्य अवसर पर लाखों श्रद्धालुओं की सेवा का पुण्य अवसर पाकर हम धन्य हैं।
सेवा साधना है, सेवा प्रार्थना है और सेवा ही परमात्मा है।
माँ गंगा का आशीर्वाद हम सभी पर बना रहे। 🙏#SevaHiSaadhnaHai pic.twitter.com/MjpRNILjMo
— Gautam Adani (@gautam_adani) January 24, 2025
Advertisement
X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಹಾ ಕುಂಭದ ದೈವಿಕ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸುವ ಶುಭ ಅವಕಾಶ ಪಡೆದಿದ್ದೇವೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು. ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಹಾ ಕುಂಭಮೇಳದ ವಿಶೇಷತೆ ಸಾರುವ 52 ನಿಮಿಷಗಳ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಫೆ.26 ರವರೆಗೆ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಅದಾನಿ ಗ್ರೂಪ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ISKON) ಭಕ್ತರಿಗೆ ಊಟವನ್ನು ಒದಗಿಸಲು ಕೈಜೋಡಿಸಿವೆ.
Advertisement
ಅದಾನಿಯವರು ಮಂಗಳವಾರ ಅವರ ಪತ್ನಿ ಪ್ರೀತಿ ಅದಾನಿ ಮತ್ತು ಪುತ್ರ ಕರಣ್ ಅದಾನಿ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಅವರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.