ಪ್ರಯಾಗ್‌ರಾಜ್: ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳದಲ್ಲಿ (Maha Kumbh Mela) ನಾಲ್ಕು ಹೊಸ ದಾಖಲೆಗಳನ್ನು ಮಾಡಲು ಉತ್ತರ ಪ್ರದೇಶ (Uttar Pradesh) ಸರ್ಕಾರ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ (Guinness World Records) ತಂಡವೂ ಪ್ರಯಾಗ್‌ರಾಜ್ ತಲುಪಿದೆ.
ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ 48 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಇದು ಈಗಾಗಲೇ ವಿಶ್ವದ ಅತಿದೊಡ್ಡ ದಾಖಲೆಯಾಗಿದೆ. ಇದರ ನಡುವೆ ಫೆ.14 ರಿಂದ 17ರ ನಡುವೆ ನಾಲ್ಕು ಹೊಸ ದಾಖಲೆಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಸಜ್ಜಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ಹಿಂದಿರುಗುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು
Advertisement
Advertisement
ಮೊದಲ ದಿನ ಫೆಬ್ರವರಿ 14 ರಂದು 15,000 ನೈರ್ಮಲ್ಯ ಕಾರ್ಮಿಕರು ಸಂಗಮ ಪ್ರದೇಶದಲ್ಲಿ ಗಂಗಾ ನದಿಯ ದಡದ 10 ಕಿ.ಮೀ ಉದ್ದವನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಲಿದ್ದಾರೆ. 2019ರ ಕುಂಭಮೇಳದಲ್ಲಿ 10 ಸಾವಿರ ನೈರ್ಮಲ್ಯ ಕಾರ್ಮಿಕರು ಒಟ್ಟಾಗಿ ಗುಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ
Advertisement
ಫೆಬ್ರವರಿ 15 ರಂದು 300 ಉದ್ಯೋಗಿಗಳು ನದಿಗೆ ಇಳಿದು ಸ್ವಚ್ಛತಾ ಅಭಿಯಾನವನ್ನು ವೇಗಗೊಳಿಸಲಿದ್ದಾರೆ. ಫೆಬ್ರವರಿ 16 ರಂದು ತ್ರಿವೇಣಿ ಮಾರ್ಗದಲ್ಲಿ 1000 ಇ-ರಿಕ್ಷಾಗಳನ್ನು ಓಡಿಸಿದ ದಾಖಲೆಯೂ ನಿರ್ಮಾಣವಾಗಲಿದೆ. ಫೆಬ್ರವರಿ 17 ರಂದು 10 ಸಾವಿರ ಜನರ ಕೈ ಮುದ್ರೆಗಳನ್ನು ತೆಗೆದುಕೊಳ್ಳುವ ದಾಖಲೆಯನ್ನು ಸಹ ಮಾಡಲಾಗುವುದು. ನಾಲ್ಕು ದಾಖಲೆಗಳನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ದರ ಬದಲಾವಣೆ, ಶೀಘ್ರವೇ ಪರಿಷ್ಕೃತ ಪಟ್ಟಿ ಪ್ರಕಟ: ಬಿಎಂಆರ್‌ಸಿಎಲ್
Advertisement
2019ರಲ್ಲಿ ಮೂರು ದಾಖಲೆ:
2019ರ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಮೂರು ದಾಖಲೆಗಳನ್ನು ಮಾಡಲಾಗಿದ್ದು, ಇವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ 500ಕ್ಕೂ ಹೆಚ್ಚು ಶಟಲ್ ಬಸ್‌ಗಳನ್ನು ಓಡಿಸುವ ಮೂಲಕ ಅತಿದೊಡ್ಡ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವ ದಾಖಲೆಯನ್ನು ಸೃಷ್ಟಿಸಲಾಯಿತು. ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ
ಎರಡನೇ ದಾಖಲೆಯು 10,000 ನೈರ್ಮಲ್ಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಅತಿದೊಡ್ಡ ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿತ್ತು. ಮೂರನೆಯದಾಗಿ, 7,500 ಜನರ ಕೈ ಮುದ್ರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಬಾರಿ ಕೈಮುದ್ರೆ ಮತ್ತು ಸ್ವಚ್ಛತಾ ವ್ಯವಸ್ಥೆಗೆ ಸಂಬಂಧಿಸಿದ ಎರಡು ದಾಖಲೆಗಳನ್ನು ಮುರಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸುವ ಉದ್ದೇಶ ಹೊಂದಿದೆ. ಇದನ್ನೂ ಓದಿ: UnSold ಪ್ಲೇಯರ್, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?