ನವದೆಹಲಿ: 137 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಎಲ್‍ಪಿಜಿ ದರ ಏರಿಕೆಯ ಬೆನ್ನಲ್ಲೇ ಇದೀಗ ಪ್ಯಾಕೆಟ್ ಹಾಲಿನ ದರ ಹಾಗೂ ಮ್ಯಾಗಿ ನೂಡಲ್ಸ್‌ಗಳ ಬೆಲೆಯೂ ಏರಿಕೆಯಾಗಿದೆ.
Advertisement
ಮಾರ್ಚ್ 22ರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ. ಅಂತೆಯೇ ಗೃಹ ಬಳಕೆಯ ಸಿಲಿಂಡರ್ ದರ 50 ರೂ. ಏರಿಕೆಯಾಗಿದೆ. ಈ ಬೆನ್ನಲ್ಲೇ ಸಹಕಾರಿ ಹಾಲು ಒಕ್ಕೂಟಗಳಾದ ಅಮುಲ್, ಮದರ್ ಡೈರಿ ಮತ್ತು ಪರಾಗ್ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದ್ದು, ಪ್ಯಾಕೆಟ್ ಹಾಲಿನ ದರ ಪ್ರತಿ ಲೀಟರ್ 2 ರೂ.ಗೆ ಹೆಚ್ಚಿಸಿವೆ. ಮಧ್ಯಪ್ರದೇಶದ ಸಾಂಚಿ ಹಾಲಿನ ಸಹಕಾರಿಯು ಇದೇ ಕ್ರಮವನ್ನು ಅನುಸರಿಸಿದ್ದು, ಪ್ರತಿ ಲೀ. ಹಾಲಿಗೆ 5 ರೂ. ಹೆಚ್ಚಿಸಿದೆ. ಇದನ್ನೂ ಓದಿ: 2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!
Advertisement
Advertisement
ಮ್ಯಾಗಿ – ನೂಡಲ್ಸ್ ಸಹ ದುಬಾರಿ
ಮ್ಯಾಗಿ ತಯಾರಕ ನೆಸ್ಲೆ ಸಂಸ್ಥೆಯು ಮಾರ್ಚ್ ಆರಂಭದಲ್ಲೇ ಘೋಷಿಸಿದಂತೆ ಮ್ಯಾಗಿ ಮತ್ತು ನೂಡಲ್ಸ್‍ನ ಪ್ರತಿ ಸಣ್ಣ ಪ್ಯಾಕೆಟ್‍ಗಳಿಗೆ 2 ರೂ., ಸಾಧಾರಣ ಹಾಗೂ ದೊಡ್ಡಪ್ಯಾಕ್‍ಗೆ 3 ರೂ.ಗಳನ್ನು ಹೆಚ್ಚಿಸಿದೆ. ಅದೇ ರೀತಿ ನೆಸ್ಕೆಫೆ ಕ್ಲಾಸಿಕ್, ಬ್ರೂ ಮತ್ತು ತಾಜ್ ಮಹಲ್ ಟೀ ಬೆಲೆಯನ್ನೂ ಕೂಡ ಹೆಚ್ಚಿಸಲಾಗಿದೆ.
Advertisement