ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್‌ಗಳ ಕುರಿತಾದ ಚಿತ್ರಗಳು ಸಾಕಷ್ಟು ಯಶಸ್ಸು ಕಾಣುತ್ತಿದೆ. ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಲು ನಿರ್ಮಾಪಕರು ಉತ್ಸಾಹ ತೋರಿಸುತ್ತಿದ್ದಾರೆ. ಈಗ ನಿಜ ಜೀವನದಲ್ಲಿ ಸಾಧನೆ ಮಾಡಿರುವ ಸಾಧಕನ ಕಥೆಯನ್ನು ಹೇಳಲು `ಆರ್‌ಆರ್‌ಆರ್’ ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್ ಹೊರಟಿದ್ದಾರೆ.
Advertisement
`ಮಗಧೀರ’, `ಭಜರಂಗಿ ಭಾಯಿಜಾನ್’, `ಬಾಹುಬಲಿ’, ಮುಂತಾದ ಸೂಪರ್ ಹಿಟ್ ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ ಈಗ ಅವರು ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಬರೋಪಿಕ್ ಸ್ಕ್ರಿಪ್ಟ್ ಬರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ಕೊಡುಗೆ ಅಪಾರ. ಕವಿಯಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ ಬಂಕಿಮ್ ಚಂದ್ರ ಚಟರ್ಜಿ ಸಾಧನೆ ಮಾಡಿದ್ದಾರೆ.
Advertisement
Advertisement
ನಿಜ ಜೀವನದಲ್ಲಿ ಸ್ಪೂರ್ತಿಯ ಚಿಲುವೆಯಾಗಿರುವ ಬಂಕಿಮ್ ಚಂದ್ರ ಚಟರ್ಜಿ ಅವರ ಜೀವನಗಾಥೆಯನ್ನು ತೆರೆಯ ಮೇಲೆ ತೋರಿಸಲು ರಾಮ್ ಕಮಲ್ ಸಜ್ಜಾಗಿದ್ದಾರೆ. ಖ್ಯಾತ ಸಾಹಿತಿಕಾರನ ಇಂಚಿಂಚೂ ಸಾಧನೆಯನ್ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆಯಲಿದ್ದಾರೆ. ಇದನ್ನು ಓದಿ:ಚೀನಾಗೆ ಸೆಡ್ಡು ಹೊಡೆದ ಯಶ್ ಫ್ಯಾನ್ಸ್- ಮಾಲೂರಿನಲ್ಲಿ ಮೊಸಾಯಿಕ್ ಆರ್ಟ್ ದಾಖಲೆ
Advertisement
ರಾಜಮೌಳಿ ಅವರ ಯಶಸ್ಸಿಗೆ ತಂದೆ ವಿಜಯೇಂದ್ರ ಪ್ರಸಾದ್ ಅವರ ಕೊಡುಗೆ ದೊಡ್ಡದಿದೆ. `ಆರ್‌ಆರ್‌ಆರ್’ ಯಶಸ್ಸಿನ ನಂತರ ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್‌ಗೆ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದೆ. ಖ್ಯಾತ ಸಾಹಿತಿಕಾರನ ಜೀವನ ಸಾಧನೆಯನ್ನ ತೆರೆಯ ತೋರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.