ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಪುತ್ರ ನಕುಲ್ ನಾಥ್ ತಮ್ಮ ಬಳಿ ಒಟ್ಟು 660.1 ಕೋಟಿ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
ಉದ್ಯಮಿ ಮತ್ತು ರಾಜಕಾರಣಿಯಾಗಿರುವ ನಕುಲ್ ಬಳಿ ಒಟ್ಟು 615.93 ಕೋಟಿ ರೂ. ಸ್ಥಿರಾಸ್ತಿ ಇದ್ದರೆ ಪತ್ನಿ ಪ್ರಿಯಾ ಅವರ ಬಳಿ 2.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮಗನಿಗೆ ಹೋಲಿಸಿದರೆ ತಂದೆಯ ಆಸ್ತಿ ಕಡಿಮೆಯಿದ್ದು, ಚಿಂದ್ವಾರ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಮಲ್‍ನಾಥ್ ತಮ್ಮ ಬಳಿ ಒಟ್ಟು 124 ಕೋಟಿ ರೂ. ಆಸ್ತಿಯಿಂದೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
Advertisement
Advertisement
ತನ್ನ ಬಳಿ 41.77 ಕೋಟಿ ಚರಾಸ್ತಿ ಇದ್ದರೆ ಪತ್ನಿಯ ಬಳಿ ಯಾವುದೇ ಚರಾಸ್ತಿ ಇಲ್ಲ ಎಂದು ನಕುಲ್ ಘೋಷಿಸಿಕೊಂಡಿದ್ದಾರೆ. ಆಸ್ತಿಗಳ ಪೈಕಿ ಕೆಲವು ತನ್ನ ಬಳಿ ಇದ್ದರೆ, ಕೆಲವು ಕುಟುಂಬ ನಿಯಂತ್ರಣದಲ್ಲಿರುವ ಕಂಪನಿ ಮತ್ತು ಟ್ರಸ್ಟ್ ನಲ್ಲಿದೆ ಎಂದು ನಕುಲ್ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ನಕುಲ್ ಮತ್ತು ಪ್ರಿಯಾ ದಂಪತಿ ಯಾವುದೇ ವಾಹನವನ್ನು ಹೊಂದಿಲ್ಲ.
Advertisement
896.669 ಗ್ರಾಂ ಚಿನ್ನದ ಬಾರ್, 7.630 ಕೆಜಿ ಬೆಳ್ಳಿ, 78.45 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳು ನಕುಲ್ ಬಳಿ ಇದ್ದರೆ, ಪತ್ನಿ ಪ್ರಿಯಾ ಬಳಿ 270.322 ಗ್ರಾಂ ಚಿನ್ನ, 57.62 ಲಕ್ಷ ರೂ. ಮೌಲ್ಯದ ವಜ್ರದ ಆಭರಣಗಳು ಇವೆ.
Advertisement
ಆದಾಯದಲ್ಲಿ ಪತಿಗಿಂತ ಪತ್ನಿಯ ಆದಾಯವೇ ಜಾಸ್ತಿ ಇದ್ದು 2017-18ರ ಆದಾಯ ತೆರಿಗೆ ರಿಟನ್ರ್ಸ್ ವೇಳೆ ಪ್ರಿಯಾ 4.18 ಕೋಟಿ ಆದಾಯ ಹೊಂದಿದ್ದರೆ, ನಕುಲ್ 2.76 ಕೋಟಿ ರೂ. ಆದಾಯ ಹೊಂದಿದ್ದಾರೆ. ನಕುಲ್ ತಮ್ಮ ಸಹೋದರನ ಜೊತೆ ಜಂಟಿಯಾಗಿ ಚಿಂದ್ವಾರ ಜಿಲ್ಲೆಯಲ್ಲಿ ಒಟ್ಟು 7.82 ಎಕ್ರೆ ಜಮೀನು ಹೊಂದಿದ್ದಾರೆ. ಇಲ್ಲಿಯವರಗೆ ನಕುಲ್ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ.
According to the affidavit filed before the electoral officer, Nakul Nath has declared in his nomination papers that he has Rs 615,93,17,714 moveable and immoveable properties#LokSabhaElections2019
https://t.co/nDfnZzxYBI
— Economic Times (@EconomicTimes) April 9, 2019
1980ರಿಂದ 2014ರವರೆಗಿನ ಎಲ್ಲ ಲೋಕಸಭಾ ಚುನಾವಣೆಯಲ್ಲಿ ಚಿಂದ್ವಾರಾ ಕ್ಷೇತ್ರದಿಂದ ಕಮಲ್‍ನಾಥ್ ಜಯಗಳಿಸಿದ್ದು, ಈಗ ಈ ಚುನಾವಣೆಯಲ್ಲಿ ಅವರ ಪುತ್ರ ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಕಮಲ್‍ನಾಥ್ 2018ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಚುನಾವಣೆ ನಡೆದ 6 ತಿಂಗಳ ಒಳಗಡೆ ಶಾಸಕರಾಗಬೇಕಾಗಿರುವ ಹಿನ್ನೆಲೆಯಲ್ಲಿ ಕಮಲ್‍ನಾಥ್ ಈಗ ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.