ಭೋಪಾಲ್: ಮಾನಸಿಕ ಅಸ್ವಸ್ಥರಾಗಿರೋ ಹಿರಿಯ ನಾಗರಿಕರೊಬ್ಬರನ್ನು ತನ್ನ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡನೊಬ್ಬ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಾಮಪುರದಲ್ಲಿ ನಡೆದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವೃದ್ಧನ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ವ್ಯಕ್ತಿ ಮುಸ್ಲಿಮನಾಗಿದ್ದರೆ, ಅವನ ಹತ್ಯೆಗೆ ನಿಮ್ಮ ಸಮ್ಮತಿ ಇತ್ತೇ? ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾರಿಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
Advertisement
ನೀಮುಚ್ ಘಟನೆಯ ಕುರಿತು ನರೋತ್ತಮ್ ಮಿಶ್ರಾ ಅವರು ಪ್ರತಿಕ್ರಿಯಿಸಿ, ವೃದ್ಧನಿಗೆ ವಯಸ್ಸಾಗಿತ್ತು. ಮಾನಸಿಕ ಅಸ್ವಸ್ಥರಾಗಿದ್ದರು. ತಮ್ಮನ್ನು ತಾವು ಪರಿಚಯಿಸಿಕೊಳ್ಳುವಷ್ಟು ಶಕ್ತರಾಗಿರಲಿಲ್ಲ. ಅವರ ಕುಟುಂಬದವರೇ ಅವರ ಮಾನಸಿಕ ಸ್ಥಿತಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವವರಿಗೆ ಎಚ್ಚರಿಕೆ ನೀಡಿದ ಯೋಗಿ – ನಿಯಮ ಮೀರಿದರೆ ಕ್ರಮ
Advertisement
So if he had turned out to be a Muslim, it would be okay to lynch him???? What kind of messaging is this from Home Minister of MP?!?
Utter breakdown of rule of law ! https://t.co/iRnBAo0PxE
— Swara Bhasker (@ReallySwara) May 22, 2022
Advertisement
ಈಗಾಗಲೇ ಆರೋಪಿಯನ್ನು ಪೊಲೀಸರು ಗುರುತಿಸಿ ಅವನನ್ನು ಬಂಧಿಸಿದ್ದು, ಅವನ ವಿರುದ್ಧ ಐಪಿಸಿ ಸೆಕ್ಷನ್ 304 (ನರಹತ್ಯೆ), 302 (ಕೊಲೆಗೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಮೃತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
Advertisement
ಈ ಕುರಿತು ಟ್ವೀಟ್ ಮಾಡಿರುವ ಸ್ವರಾ ಅವರು, ಹಾಗಿದ್ದರೆ ಆತ ತನ್ನನ್ನು ತಾನು ಮುಸ್ಲಿಂ ಎಂದು ಪರಿಚಯಿಸಿಕೊಂಡಿದ್ದಿದ್ದರೆ, ಆತನನ್ನು ಹತ್ಯೆ ಮಾಡುವುದಕ್ಕೇ ನಿಮ್ಮ ಸಮ್ಮತಿ ಇತ್ತೇ? ಮಧ್ಯ ಪ್ರದೇಶದ ಗೃಹ ಸಚಿವರಿಂದ ಇದೆಂತಹ ಸಂದೇಶ ರವಾನೆಯಾಗಿದೆ? ಈ ಘಟನೆಯಲ್ಲಿ ಕಾನೂನನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್
Bhopal MP| He was old, got lost & could not introduce himself. His family told us he was mentally unstable. Accused was identified & booked under 302 & 304 IPC. We are maintaining communication with family, they are satisfied: Narottam Mishra, MP Home Min on Neemuch incident pic.twitter.com/V7dC7pRyKI
— ANI MP/CG/Rajasthan (@ANI_MP_CG_RJ) May 21, 2022
ಆರೋಪಿಯು, ಭವಾರ್‍ಲಾಲ್ ಜೈನ್ ಎಂಬ ವೃದ್ಧನಿಗೆ `ನೀನು ಮೊಹಮ್ಮದ್? ಎಂದು ಪ್ರಶ್ನಿಸಿ, ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸಿ ಹಲ್ಲೆ ನಡೆಸಿದ್ದ. ಈ ದೃಶ್ಯದ ವೀಡಿಯೋ ಸಿಸಿಟಿವಿವೊಂದರಲ್ಲಿ ಸೆರೆಯಾಗಿತ್ತು. ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.