ಚೆನ್ನೈ: 2000 ರೂ. ಹಣ ಪಡೆದು ನೀವು ಮತ ಹಾಕಲು ಹೋಗುತ್ತೀರಾ? ಹಾಗಿದ್ದರೆ ನೀವು ಹಣದ ಆಸೆಗೆ ಮತ ಹಾಕಿ 5 ವರ್ಷಗಳ ಕಾಲ ಮೌಸ್ ಟ್ರ್ಯಾಪ್‌ಲ್ಲಿ ಸಿಲುಕಿದಂತೆ ಎಂದು ವಿಶೇಷವಾಗಿ ಕರೆ ನೀಡಿ ಅಭ್ಯರ್ಥಿಯೊಬ್ಬರು ಜನ ಜಾಗೃತಿ ಮೂಡಿಸಿದ್ದಾರೆ.
ಮಧುರೈನ ಅಭ್ಯರ್ಥಿ ಜಾಫರ್ ಶೆರೀಫ್ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದಾಗ ಕೈಯಲ್ಲಿ ಮೌಸ್ ಟ್ರ್ಯಾಪ್ ಹಾಗೂ ಅದರ ಮೇಲೆ 2000 ರೂ. ನೋಟು ಹಿಡಿದುಕೊಂಡು ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಹಾಕಿ ಎಂದು ವಿಶೇಷ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು
ಮಧುರೈನ ವಾರ್ಡ್ ನಂ.3 ರಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಜಾಫರ್ ತಮಿಳುನಾಡಿನಲ್ಲಿ ಹಣ ಪಡೆದು ಮತ ಹಾಕುವ ವಿಚಾರದಲ್ಲಿ ಜಾಗೃತಿ ಮೂಡಿಸಲು ಮೌಸ್ ಟ್ರ್ಯಾಪ್ ತಂದಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮತಕ್ಕಾಗಿ ಹಣದ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹಣ ಪಡೆದು ಮತ ನೀಡುವುದು 5 ವರ್ಷಗಳ ಕಾಲ ಬಲೆಯಲ್ಲಿ ಸಿಲುಕಿಕೊಂಡಂತೆ ಎಂದು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.
ನಾನು ನನ್ನು ವಾರ್ಡ್ ಅನ್ನು ಸ್ವಚ್ಛತೆಯ ಮಾದರಿಯಾಗಿ ಪರಿವರ್ತಿಸಲು ಬಯಸುತ್ತೇನೆ. ಹಣದ ಆಸೆಗೆ ಜನರು ಮತ ಹಾಕಿ ಹೇಗೆ ಸಿಕ್ಕಿಕೊಳ್ಳುತ್ತಾರೆ ಎಂದು ತಿಳಿಸಲು ನಾನು ಮೌಸ್ ಟ್ರ್ಯಾಪ್ ಬಳಸುತ್ತಿದ್ದೇನೆ. ನಾನು ಉತ್ತಮ ಉದ್ಯೋಗ ಹೊಂದಿದ್ದೇನೆ ಹಾಗೂ ಒಳ್ಳೆಯ ಗಳಿಕೆಯೂ ಇದೆ. ಆದರೆ ಇದೀಗ ನಾನು ಒಬ್ಬ ವಿದ್ಯಾವಂತ ನಾಗರಿಕನಾಗಿ ದೇಶಕ್ಕೆ ಹಿಂದಿರುಗಿಸುವ ಸಮಯ ಬಂದಿದೆ. ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಜಾಫರ್ ಹೇಳಿದ್ದಾರೆ. ಇದನ್ನೂ ಓದಿ: ಕಾರಿನ ಹೆಡ್‍ಲೈಟ್ ಬೆಳಕಿನಲ್ಲಿ ಪರೀಕ್ಷೆ ಬರೆದ 400 ವಿದ್ಯಾರ್ಥಿಗಳು
ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 4ರ ವರೆಗೆ ಸಮಯವಿದೆ. ಫೆಬ್ರವರಿ 19ರಂದು ಚುನಾವಣೆ ನಡೆಯಲಿದ್ದು, 22ರಂದು ಮತ ಎಣಿಕೆ ನಡೆಯಲಿದೆ.