ಲಕ್ನೋ: ಉತ್ತರ ಪ್ರದೇಶ ಸರ್ಕಾರವು (Uttar Pradesh government) ರಾಜ್ಯದಲ್ಲಿನ ಮದರಸಾಗಳ (Madrassas) ಸಮಯವನ್ನು ಒಂದು ಗಂಟೆ ವಿಸ್ತರಿಸಿದೆ ಮತ್ತು ಇದರ ಪರಿಷ್ಕೃತ ಸಮಯವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಮದರಸಾಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ ನಮಾಜ್ (Namaz) ಮಾಡುವ ಸಮಯ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿವೆ.
Advertisement
ರಾಜ್ಯ ಮದರಸಾ ಶಿಕ್ಷಣ ಮಂಡಳಿಯು ಅನುದಾನಿತ ಮದರಸಾಗಳಿಗೆ ಹೊಸ ವೇಳಾಪಟ್ಟಿಯನ್ನು (New Timetable) ಹೊರಡಿಸಿದ್ದು, ಅದರ ಪ್ರಕಾರ ತರಗತಿಗಳು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ ಮತ್ತು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ. ತರಗತಿಗಳು ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿವೆ. 30 ನಿಮಿಷಗಳ ಊಟದ ವಿರಾಮದ ನಂತರ, ತರಗತಿಗಳು 12:30 ಕ್ಕೆ ಪುನರಾರಂಭಗೊಳ್ಳುತ್ತವೆ ಮತ್ತು 3 ಗಂಟೆಯವರೆಗೆ ಇರುತ್ತದೆ. ಇದನ್ನೂ ಓದಿ: ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ಮಾಡಿ ಪರಾರಿಯಾದ ಉದ್ಯಮಿ ಮಗ
Advertisement
ವಿದ್ಯಾರ್ಥಿಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾದ ಹೊಸ ವೇಳಾಪಟ್ಟಿಯು ರಾಜ್ಯದ ಎಲ್ಲಾ 14,513 ಮಾನ್ಯತೆ ಪಡೆದ ಮದರಸಾಗಳಿಗೆ ಅನ್ವಯಿಸುತ್ತದೆ. ಮದರಸಾಗಳಲ್ಲಿ ಮಧ್ಯಾಹ್ನದ ಪ್ರಾರ್ಥನೆಯೂ ಪ್ರಮುಖ ಭಾಗವಾಗಿದ್ದು, ಅದಕ್ಕಾಗಿ ಸಮಯಾವಕಾಶ ನೀಡುವಂತೆ ಲಕ್ನೋದ ಶಕುಲ್ ಆಲಂ ಸಬಾರಿಯಾ ಹಾಗೂ ಮದರಸಾದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಮುಸ್ಲಿಂ ವಿದ್ವಾಂಸ ಮೌಲಾನಾ ಇಶ್ತಿಯಾಕ್ ಖಾದ್ರಿ, ಮದರಸಾ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳನ್ನು ಎಲ್ಲಾ ಮದರಸಾಗಳು ಒಪ್ಪಿಕೊಂಡಿದೆ. ಆದರೆ ಪ್ರತಿ ಮದರಸಾದಲ್ಲಿ ತಮ್ಮ ಪದ್ಧತಿಗಳನ್ನು ಅನುಸರಿಸುವಂತೆ ಮದರಸಾ ಮಂಡಳಿಯು ಕಾಳಜಿ ವಹಿಸಬೇಕು. ನಮಾಜ್ ಮದರಸಾ ಶಿಕ್ಷಣದ ಪ್ರಮುಖ ಅಂಗವಾಗಿದ್ದು, ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ.