ಬೆಂಗಳೂರು: ಸಾಲ ತಿರಿಸುವುದಕ್ಕೆ ಟೆಕ್ಕಿಯೊಬ್ಬ ಎಸ್‍ಬಿಐ ಬ್ಯಾಂಕ್ ನಲ್ಲಿ 85 ಲಕ್ಷ ಮೌಲ್ಯದ ಚಿನ್ನಾಭರಣ ರಾಬರಿ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Advertisement
ಬೆಂಗಳೂರಿನ ಕಾಮಾಕ್ಷಿ ಪಾಳ್ಯ ನಿವಾಸಿ ಧೀರಜ್ ಬಂಧಿತ ಎಂಜಿನಿಯರ್. ಆನ್‍ಲೈನ್ ಟ್ರೇಡಿಂಗ್‍ನಲ್ಲಿ ಹಣ ಹಾಕಿದ್ದ ಎಂಜಿನಿಯರ್ ಧೀರಜ್ ಸುಮಾರು 40 ಲಕ್ಷ ಕಳೆದುಕೊಂಡು ಸಾಲಕ್ಕೆ ಸಿಲುಕಿದ್ದ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಬ್ಯಾಂಕ್ ರಾಬರಿ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾನೆ. ಅದರಂತೆ ಯೂಟ್ಯೂಬ್‍ಗಳಲ್ಲಿ ಹೇಗೆ ರಾಬರಿ ಮಾಡಬೇಕು ಅಂತಾ ವಿಡಿಯೋಗಳನ್ನು ನೋಡಿದ್ದಾನೆ. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ
Advertisement
Advertisement
ನಂತರ ಮಡಿವಾಳದ ಬಿಟಿಎಂ ಲೇಔಟ್‍ನ ಎಸ್‍ಬಿಎಂ ಬ್ಯಾಂಕ್ ಬಾಗಿಲು ಹಾಕುವ ವೇಳೆಗೆ ಎಂಟ್ರಿಯಾದ ಎಂಜಿನಿಯರ್ ಕಳ್ಳ ಮ್ಯಾನೇಜರ್ ಮತ್ತು ಓರ್ವ ಮಹಿಳಾ ಸಿಬ್ಬಂದಿಯನ್ನು ಬೆದರಿಸಿ 3.75 ಲಕ್ಷ ನಗದು, 1.8 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ನಂತರ ಪೊಲೀಸರ ಕೈಗೆ ಸಿಗದಂತೆ ಬೇರೆ, ಬೇರೆ ಕಡೆಗಳಲ್ಲಿ ಸುತ್ತಾಡುತ್ತಿದ್ದನು. ಇದನ್ನೂ ಓದಿ: ವೈದ್ಯನ ಎಡವಟ್ಟು – ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ರೋಗಿ ಸಾವು
Advertisement
ಪೊಲೀಸರ ತನಿಖೆ ವೇಳೆ ಆರೋಪಿ ಧೀರಜ್ ಸಾಲಗಾರರಿಗೆ ಹಣ ಹಿಂತಿರುಗಿಸುತ್ತಿರುವ ವಿಚಾರ ತಿಳಿದು ಸಾಲಗಾರರ ಬಗ್ಗೆ ಮಾಹಿತಿ ಕಲೆಹಾಕಿದರು. ಐದು ದಿನಗಳ ನಂತರ ನಗರದ ವ್ಯಕ್ತಿಯೊಬ್ಬರಿಗೆ ಸಾಲ ಹಿಂತಿರುಗಿಸಲು ಬಂದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಧೀರಜ್‍ನ ವಶಕ್ಕೆ ಪಡೆದ ಪೊಲೀಸರು, 85 ಲಕ್ಷ ಮೌಲ್ಯದ ಚಿನ್ನಭರಣ ನಗದು ವಶಕ್ಕೆ ಪಡೆದಿದ್ದಾರೆ.