ಮಡಿಕೇರಿ: ಯುನೈಟೆಡ್ ನೇಷನ್ಸ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕೌನ್ಸಿಲ್‌ನ 2025ನೇ ಸಾಲಿನ ಯೂತ್ ಫೋರಂಗೆ (ECOSOC Youth Forum 2025) ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯ ಯೂತ್ ಫೋರಂ ಇದೇ ಏ.15 ರಿಂದ 17ರ ವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಭಾರತ ಸೇರಿದಂತೆ ವಿಶ್ವದ 138 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್
ʻಅಭಿವೃದ್ಧಿ ಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಅಭಿವೃದ್ಧಿಶೀಲತೆಯನ್ನು ಹೆಚ್ಚಿಸುವುದುʼ ವಿಷಯದ ಅಡಿಯಲ್ಲಿ ಯೂತ್ ಫೋರಂ ಆಯೋಜಿಸಲ್ಪಟ್ಟಿದೆ. ಈ ಪ್ರತಿಷ್ಠಿತ ಶೃಂಗಸಭೆಗೆ ಭಾರತದ ಪ್ರತಿನಿಧಿಯಾಗಿ ಯದೀಶ್ ರಮೇಶ್ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಣ್ಣಮ್ಮ ದೇವಿಗೆ ಹರಕೆ ಸಲ್ಲಿಸಿದ ದರ್ಶನ್ ಪತ್ನಿ
ಯದೀಶ್ ಯಾರು?
ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್ ರಮೇಶ್ ಹಾಗೂ ಕೆ.ಆರ್ ರಮ್ಯಾ ದಂಪತಿಯ ಪುತ್ರ ಯದೀಶ್. ಅಮೆರಿಕದ ಬೋಸ್ಟನ್‌ನ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದ ನಿರ್ಮಿತಿ ಕೇಂದ್ರದಲ್ಲಿ ಭಾರೀ ಅಕ್ರಮ – ಲೋಕಾಯುಕ್ತಕ್ಕೆ ದೂರು
ಈ ಶೃಂಗಸಭೆಯಲ್ಲಿ 2030ರ ಕಾರ್ಯಸೂಚಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ನೇತೃತ್ವದಲ್ಲಿ ಜಗತ್ತನ್ನು ಹೆಚ್ಚು ನ್ಯಾಯಯುತ, ಹಸಿರು ಮತ್ತು ಸುಸ್ಥಿರ ಸ್ಥಳವಾಗಿ ಪರಿವರ್ತಿಸಲು ಕೈಗೊಳ್ಳಬಹುದಾದ ಕ್ರಮಗಳು ಮತ್ತು ಶಿಫಾರಸುಗಳ ಬಗ್ಗೆ ಚರ್ಚಿಸಲು ಯುವಜನರಿಗೆ ವೇದಿಕೆ ಕಲ್ಪಿಸಲಾಗಿದೆ. ಇದನ್ನೂ ಓದಿ: ವಾರಣಾಸಿ ಗ್ಯಾಂಗ್ ರೇಪ್ – ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ