ಮಡಿಕೇರಿ: ಅನಾರೋಗ್ಯದಿಂದ ಮೃತಪಟ್ಟ ಕಾರ್ಮಿಕ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕುಶಾಲನಗರದ ರುದ್ರ ಭೂಮಿಯಲ್ಲಿ ನೆರವೇರಿಸುವ ಮೂಲಕ ಮಾನವೀಯತೆಯ ಕಾರ್ಯವೊಂದು ನಡೆದಿದೆ.
ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಯೂತ್ ಕಮಿಟಿಯಿಂದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಅನಾರೋಗ್ಯದಿಂದ ಕಾರ್ಮಿಕ ಚಂದ್ರ ಎಂಬಾತನ ಪತ್ನಿ ಕವಿತಾ ಮೃತಪಟ್ಟಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ ಗ್ರಾಮದವರಾದ ಈ ಕುಟುಂಬ ಲಾಕ್‍ಡೌನ್‍ಗೂ ಮೊದಲೇ ಸೋಮವಾರಪೇಟೆ ತಾಲೂಕಿನ ಮಾದಾಪುರದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು.
Advertisement
ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಕವಿತಾ ಅವರಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಮೃತಪಟ್ಟಿದ್ದರು. ಲಾಕ್‍ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಗದಿದ್ದರಿಂದ ರಕ್ಷಣಾ ವೇದಿಕೆಯ ಉಮೇಶ್ ಹಾಗೂ ಸಂದೀಪ್ ಹಾಗೆಯೇ ಯೂತ್ ಕಮಿಟ್ ಕಲೀಲ್ ಕ್ರಿಯೇಟಿವ್ ಸೇರಿ ಹಲವರು ಸ್ವತಃ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
Advertisement