ಮಡಿಕೇರಿ: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಸಮಾಜದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು, ಮಹಿಳೆ ಕೂಡ ಪುರುಷನಿಗಿಂತ ಕಡಿಮೆಯಿಲ್ಲ ಎನ್ನುವ ಉದ್ದೇಶದಿಂದ ಈ ದಿನವನ್ನು ಅಂತರಾಷ್ಟ್ರೀಯ ಮಹಿಳೆಯರ ದಿನ ಎಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.
ಮಹಿಳೆಯರ ವಿಚಾರದಲ್ಲಿ ನೋಡುವಾಗ ಸದ್ಯ ಕೊಡಗು ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳ ಪಾರುಪತ್ಯ ಹೆಚ್ಚಾಗಿದೆ. ಡಿಸಿಯಾಗಿ ಅನ್ನೀಸ್ ಕೆ.ಜಾಯ್ ಇಡೀ ಜಿಲ್ಲೆಯ ಚುಕ್ಕಾಣಿಯನ್ನು ಹಿಡಿದಿದ್ರೆ, ಎಸ್‍ಪಿಯಾಗಿ ಡಾ. ಸುಮನ್ ಡಿ ಪನ್ನೇಕರ್ ಅವರು ಕಾನೂನು ಸುವ್ಯವಸ್ಥೆಯನ್ನು ಸುಗಮ ರೀತಿಯಲ್ಲಿ ಸಾಗುವಂತೆ ನೋಡಿಕೊಂಡು ಬರುತ್ತಿದ್ದಾರೆ.
Advertisement
Advertisement
ಅಲ್ಲದೇ ಜಿ.ಪಂ ಸಿಇಓ ಆಗಿ ಲಕ್ಷ್ಮಿಪ್ರಿಯಾ ಸಮರ್ಥವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿ ಜಲಪ್ರಳಯ ಉಂಟಾದ ಸಮಯದಲ್ಲೂ ಎದೆಗುಂದದೇ ಧೈರ್ಯದಿಂದ ಆಗಿನ ಡಿಸಿಯಾಗಿದ್ದ ಶ್ರೀವಿದ್ಯಾ ಕೂಡ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕು.
Advertisement
Advertisement
ಕೊಡಗು ಜಿಲ್ಲೆಯ ಅನೇಕ ಇಲಾಖೆಗಳಲ್ಲೂ ಕೂಡ ಉಪನಿರ್ದೇಶಕಿಯರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇರೋದು ಗಮನಾರ್ಹ. ಇದಿಷ್ಟೇ ಅಲ್ಲದೇ ಮಡಿಕೇರಿ ನಗರಸಭೆ ಅಧ್ಯಕ್ಷೆಯಾಗಿ ಕಾವೇರಿ ಸೋಮಣ್ಣ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇನ್ನೂ ಅಚ್ಚರಿ ವಿಚಾರ ಎಂದರೆ ಜಿಲ್ಲೆಯ ಮೂರು ತಾಲೂಕು ಪಂಚಾಯತ್‍ಗಳಲ್ಲೂ ಮಹಿಳಾಮಣಿಗಳೇ ದರ್ಬಾರ್ ನಡೆಸುತ್ತಿದ್ದಾರೆ.
ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿ ಶೋಭಾ ಮೋಹನ್, ವಿರಾಜಪೇಟೆ ತಾ.ಪಂ ಅಧ್ಯಕ್ಷೆಯಾಗಿ ಸ್ಮಿತಾ ಪ್ರಕಾಶ್, ಸೋಮವಾರಪೇಟೆ ತಾ.ಪಂ ಅಧ್ಯಕ್ಷೆಯಾಗಿ ಪುಷ್ಪಾ ರಾಜೇಶ್ ಅಧಿಕಾರವನ್ನು ಚಲಾಯಿಸುವ ಮೂಲಕ ಮಹಿಳೆಯರೂ ಕೂಡ ಪುರುಷರಿಗಿಂತ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv