ಮಡಿಕೇರಿ: ಕೊಡಗು ಎಂದಾಕ್ಷಣ ನೆನಪಿಗೆ ಬರುತ್ತಿದ್ದು ಅಲ್ಲಿನ ಪ್ರಾಕೃತಿಕ ಸೌಂದರ್ಯ, ಪ್ರವಾಸಿ ತಾಣಗಳು. ಆದರೆ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಮೂಲ ಎನ್ನಲಾಗುತ್ತಿದ್ದ ಪ್ರವಾಸೋದ್ಯಮ ಗಣನೀಯವಾಗಿ ಕುಗ್ಗಿದೆ. ಈ ನಡುವೆ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ಪ್ರವಾಸಿಗರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಧುಮ್ಮಿಕ್ಕೋ ಅಬ್ಬಿಪಾಲ್ಸ್ ಮಂಜನ್ನೇ ಹೊದ್ದು ಮಲಗಿರುವ ನಗರಿ, ಕಣ್ಣು ಕೊರೈಸುವ ರಾಜಾಸೀಟ್ ವೀವ್ಹ್, ರಾಜರ ಗದ್ದಿಗೆ. ಹೀಗೆ ಕೊಡಗು ಜಿಲ್ಲೆಯಾದ್ಯಂತ ಇರುವ ಹತ್ತಾರು ಪ್ರವಾಸಿ ತಾಣಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದವು.
ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಜಲಪ್ರಳಯ ಜಿಲ್ಲೆಯನ್ನು ಜರ್ಜರಿತವಾಗಿಸಿದೆ. ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಈಗ ಬೆರಳೆಣಿಕೆಯಷ್ಟಿದೆ. ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ ನಾವು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಹೋಟೆಲ್, ರೆಸಾರ್ಟ್ ಗಳಲ್ಲಿ ದುಡಿಯುತ್ತಿರುವ ನೌಕರರಿಗೂ ಸಂಬಳ ಕೊಡುವುದಕ್ಕೂ ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಛೇಂಬರ್ ಆಫ್ ಕಾಮರ್ಸ್ ಮಾಲೀಕ ಚಿದ್ವಿಲಾಸ್ ಹೇಳಿದ್ದಾರೆ.
ಕೊಡಗು ಪ್ರವಾಸೋದ್ಯಮ ಮತ್ತೆ ಯಥಾಸ್ಥಿತಿಗೆ ಬರುವಂತೆ ಮಾಡಲು ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಸಂಘ ಇನ್ನಿಲ್ಲದ ಹಲವು ಪ್ರಯತ್ನಗಳನ್ನು ಮಾಡುತ್ತಿವೆ. ಈ ಮಧ್ಯೆ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಮೈಸೂರು ರಾಜವಂಸ್ಥ ಯದುವೀರ್ ಒಡೆಯರ್ ಪ್ರವಾಸಿಗರನ್ನು ಆಹ್ವಾನಿಸಿ ಕೊಡಗು ಸೇಫ್ ಆಗಿದೆ ಬನ್ನಿ ಎನ್ನುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv