ಮಡಿಕೇರಿ: ಶಾಲಾ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಗಳಂತೆ ಕುಳಿತು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.
ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‍ಕೆಜಿ ಮಕ್ಕಳಿಗೆ ನೂತನವಾಗಿ ಪ್ರಾರಂಭಿಸಿದ ಆಟಿಕೆ ಕೇಂದ್ರ ಶಿಕ್ಷಣ ಉದ್ಟಾಟಿಸಿ ಶುಭ ಹಾರೈಸಿದರು. ಸಚಿವರ ಆಗಮನಕ್ಕೂ ಮೊದಲು ಶಾಲೆಯ ಪ್ರವೇಶ ದ್ವಾರದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಚಪ್ಪಾಳೆ ಮೂಲಕ ಸ್ವಾಗತ ಕೋರಿದರು.
Advertisement
Advertisement
ಪುಟಾಣಿ ಮಕ್ಕಳ ತಲೆಸವರಿದ ಸಚಿವರು ವಾಟ್ ಇಸ್ ಯುವರ್ ನೇಮ್..? ಅಂತ ಇಂಗ್ಲೀಷ್‍ನಲ್ಲಿ ಮಕ್ಕಳ ಹೆಸರು ಹೇಳಿದರು. ಆಟಿಕೆ ಕೇಂದ್ರದಲ್ಲಿ ಸುರಕ್ಷತೆ ಕಾಪಾಡುವಂತೆ ಶಿಕ್ಷಕರಿಗೆ ಸೂಚನೆ ಕಿವಿಮಾತು ಹೇಳಿದರು.
Advertisement
ಶಾಲೆಯ 8,9 ಹಾಗೂ 10 ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ್ದ ಸೌರ ಒಲೆ, ರೇಖಾಗಣಿತದ ವಿವಿಧ ಆಕೃತಿಗಳು, ಪ್ರಚ್ಛನ್ನ ಹಾಗೂ ಚಲನ ಶಕ್ತಿ, ಪರಾವಲಂಬಿಗಳು ಹೀಗೆ ವಿಜ್ಞಾನದ ವಿವಿಧ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸಿ ಮಾದರಿಗಳ ಮಾಹಿತಿ ಪಡೆದರು.
Advertisement