ಮಡಿಕೇರಿ: ಮೈಗ್ರೇಷನ್ ಕೋರ್ಸ್‍ಗೆಂದು ಮಧ್ಯಪ್ರದೇಶಕ್ಕೆ ಹೋಗಿದ್ದ ಕೊಡಗಿನ 21 ವಿದ್ಯಾರ್ಥಿಗಳು ಲಾಕ್‍ಡೌನ್‍ನಿಂದ ಮಧ್ಯಪ್ರದೇಶದ ಇಂದೋರ್ ನಲ್ಲಿ ಸಿಲುಕಿದ್ದಾರೆ.
ಕೊಡಗಿನ ಗಾಳಿಬೀಡು ನವೋದಯ ಶಾಲೆಯ 9ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 10ನೇ ತರಗತಿಯ 10 ವಿದ್ಯಾರ್ಥಿನಿಯರು ಕಳೆದ ಜುಲೈ ತಿಂಗಳಲ್ಲಿ ಕೊಡಗಿನಿಂದ ಮಧ್ಯಪ್ರದೇಶದ ಇಂದೋರ್ ಮಾನ್ಪುರ್ ಶಾಲೆಗೆ ಮೈಗ್ರೇಷನ್ ಕೋರ್ಸ್‍ಗೆಂದು ಹೋಗಿದ್ದರು.
Advertisement
Advertisement
ಪರೀಕ್ಷೆಗಳು ಮುಗಿದಿದ್ದರಿಂದ ಇದೇ ಮಾರ್ಚ್ 21ಕ್ಕೆ ವಿದ್ಯಾರ್ಥಿಗಳು ಕೊಡಗಿಗೆ ಹಿಂದಿರುಗಬೇಕಿತ್ತು. ಅದಕ್ಕಾಗಿ ಮೈಸೂರಿಗೆ ಟಿಕೆಟ್ ಬುಕಿಂಗ್ ಕೂಡ ಆಗಿತ್ತು. ಆದರೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ವಿದ್ಯಾರ್ಥಿಗಳು ವಾಪಸ್ ಆಗಲು ಸಾಧ್ಯವೇ ಆಗಿಲ್ಲ. ಹೀಗಾಗಿ ಅತ್ತ ವಿದ್ಯಾರ್ಥಿಗಳು, ಏನಾಗುವುದೋ ಎಂಬ ಆತಂಕದಲ್ಲಿದ್ದರೆ, ಇತ್ತ ಪೋಷಕರನ್ನು ತಮ್ಮ ಮಕ್ಕಳನ್ನು ಕರೆತರುವಂತೆ ಗಾಳಿಬೀಡಿನಲ್ಲಿ ನವೋದಯ ಶಾಲೆಯ ಪ್ರಾಶುಂಪಾಲರಿಗೆ ಮನವಿ ಮಾಡಿದ್ದಾರೆ.