ಮಡಿಕೇರಿ: ಸೂರ್ಯಗ್ರಹಣವಾದ ಬಳಿಕ ಮಂಜಿನ ನಗರಿ ಮಡಿಕೇರಿಗೆ ಇಂದು ಸಂಜೆ ಮಳೆಯ ಸಿಂಚನವಾಗಿದೆ.
ಇಂದು ಬೆಳಿಗ್ಗೆಯಿಂದಲೂ ಕೊಡಗಿನ ಬಹುತೇಕ ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿತ್ತು. ಹೆಚ್ಚಾಗಿ ಸೂರ್ಯಗ್ರಹಣ ಗೋಚರ ಕೊಡಗಿನ ಕುಟ್ಟ ಭಾಗದಲ್ಲಿ ಕಂಡು ಬರುತ್ತದೆ ಎಂದು ಖಗೋಳಶಾಸ್ತ್ರ ಅಧ್ಯಯನ ತಂಡದವರು ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಣೆ ಮಾಡಲು ಮುಂದಾಗಿದ್ದರು.
ಅದರೆ ಬೆಳಿಗ್ಗೆ ಕುಟ್ಟ ಸಮೀಪದ ಕಾಯಿಮಾನಿ ಗ್ರಾಮದಲ್ಲಿ ಮಂಜುಮುಸುಕಿದ ವಾತಾವರಣ ಕಂಡುಬಂತು. ನಂತರ ಕುಟ್ಟ ಸಮೀಪದ ಎಸ್ಟೇಟ್ ನಲ್ಲಿ ಕೇವಲ ಮೂರು ನಿಮಿಷಗಳ ಕಾಲ ಶೇ.80ರಷ್ಟು ಮಾತ್ರ ಸೂರ್ಯ ಗ್ರಹಣ ಗೋಚರಿಸಿತ್ತು. ಸಂಜೆ ಸೂರ್ಯಸ್ತಮಾನದ ಸಮಯದಲ್ಲಿ ಮಡಿಕೇರಿ ನಗರದ ಸುತ್ತಮುತ್ತ ಕೆಲ ನಿಮಿಷಗಳ ಕಾಲ ಮಳೆಯ ಸಿಂಚನವಾಗಿದೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮಡಿಕೇರಿಯಲ್ಲಿ ಮಂಜು ಕವಿದು ಚಳಿಯ ವಾತಾವರಣ ಸೃಷ್ಟಿಯಾಗುತ್ತದೆ. ಚಳಿ ಹಾಗೂ ಮಂಜುಮುಸುಕಿದ ವಾತಾವರಣ ವನ್ನು ವೀಕ್ಷಿಸಲು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಇಂದು ಮಂಜಿನಿಂದಾಗಿ ಮಡಿಕೇರಿ ಮನಮೋಹಕವಾಗಿ ಕಾಣುತ್ತಿತ್ತು. ಕಳೆದ ತಿಂಗಳಿನಿಂದ ಬಿಸಿಲಿನ ತಾಪದಿಂದ ಬಳಲಿದ್ದ ಮಂದಿ ಇದೀಗ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವಾಗಲೇ ಮಡಿಕೇರಿಯಲ್ಲಿ ಮಳೆಯ ಸಿಂಚನವಾಗಿದೆ.