ಉತ್ತಮ ಗಾಳಿ ಗುಣಮಟ್ಟದಲ್ಲಿ ದೇಶದಲ್ಲಿಯೇ ಮಡಿಕೇರಿ ಅಗ್ರ ಸ್ಥಾನ

Public TV
2 Min Read
madikeri 3 1

ಮಡಿಕೇರಿ: ಪ್ರಕೃತಿ ಸೌಂದರ್ಯದಿಂದ ಅಚಾರ-ವಿಚಾರಗಳಿಂದ ಗಮನ ಸೆಳೆಯುತ್ತಿದ್ದ ಕೊಡಗು ಜಿಲ್ಲೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ದೇಶದಲ್ಲಿ ಉತ್ತಮ ವಾಯುಗುಣ ಹೊಂದಿದ ನಂ 1 ಜಿಲ್ಲೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಕೊಡಗಿನ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸುದ್ದಿ ಮತ್ತಷ್ಟು ಗರಿಮೆಯನ್ನು ಕೊಟ್ಟಿದೆ.

ಕೊಡಗಿನಲ್ಲಿ ಎಲ್ಲಿ ನೊಡಿದ್ರು ಬ್ರಹ್ಮಗಿರಿ, ಪುಷ್ಪಗಿರಿಯ ಸುಂದರ ಬೆಟ್ಟಗುಡ್ಡಗಳ ಸಾಲು, ಹಸಿರ ವನರಾಶಿ, ನಡುವೆ ಆಚಾರ-ವಿಚಾರಗಳಿಂದ ವಿಶಿಷ್ಟವಾದ ಸಂಸ್ಕøತಿ ಹೊಂದಿದ ಜಿಲ್ಲೆಯಾಗಿದೆ. ಈಗ ಕೊಡಗಿನಲ್ಲಿ ಉತ್ತಮ ವಾಯುಗುಣ ಹೊಂದಿದ್ದು, ದೇಶದ ಜನ ಕೊಡಗಿನ ಕಡೆ ನೋಡುವಂತಾಗಿದೆ. ಇಲ್ಲಿನ ಉತ್ತಮ ಜಲ, ನೆಲ, ಗಾಳಿ ಉತ್ತಮ ವಾಯುಗುಣ ಹೊಂದುವಂತೆ ಮಾಡಿದೆ. ದೇಶದಲ್ಲಿ ಕೊಡಗು ಪ್ರಥಮ ಸಾಲಿನಲ್ಲಿದ್ದು, ಗದಗ ಎರಡನೇ ಸ್ಥಾನದಲ್ಲಿದೆ. ಕೇಂದ್ರ ವಾಯುಮಾಲಿನ್ಯ ಇಲಾಖೆ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಪ್ರಥಮಸ್ಥಾನ ಬಂದಿದೆ.  ಇದನ್ನೂ ಓದಿ: ಹೋರಾಟ ನಿಲ್ಲಿಸಿ ಮನೆಗೆ ಹೋಗಬೇಕೆಂದು ರೈತರಿಗೆ ಒತ್ತಾಯಿಸಿದ ನರೇಂದ್ರ ಸಿಂಗ್

madikeri 4

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ರಾಜ್ಯದಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಡುತ್ತಿರುವ ಬಗ್ಗೆ ದಿನೇ ದಿನೇ ನಾನಾ ವರದಿಗಳು ಬರುತ್ತಿವೆ. ಇಂತಹ ವಾಯುಗುಣಮಟ್ಟದಲ್ಲಿ ಏರುಪೇರು ಆಗಿ ಜನರು ಸಾಕಷ್ಟು ತೊಂದರೆ ಎದುರಿಸುವಂತೆ ಆಗಿದೆ. ಹೆಚ್ಚುತ್ತಿರುವ ವಾಹನಗಳು, ಕಾರ್ಖಾನೆಗಳ ಮಧ್ಯೆ ನಾವು ಉಸಿರಾಡುತ್ತಿರುವ ಗಾಳಿ ಹೇಗಿದೆ ಎಂಬುದು ಮುಖ್ಯ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಿಡುಗಡೆಯಾಗಿದ್ದು, ರಾಜ್ಯದ ಪ್ರವಾಸಿಗರ ಸ್ವರ್ಗ ಮಡಿಕೇರಿಯ ವಾಯುಗುಣ ಮಟ್ಟ ಅತ್ಯುತ್ತಮವಾಗಿದೆ.

ದೇಶದಲ್ಲೇ ಉತ್ತಮ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಿನ್ನೆಲೆ ಜಿಲ್ಲೆಯ ಜನರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಕಾಫಿ ಬೆಳೆಯುವಾಗಲೂ ಮರಗಳ ಆಶ್ರಯ ಮಾಡಿದರಿಂದ ವಾಯುಗುಣದ ಮಟ್ಟ ಉತ್ತಮವಾಗಿದೆ ಎನ್ನುತ್ತಾರೆ ಪರಿಸರವಾದಿಗಳು.ಇದನ್ನೂ ಓದಿ:  ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ 

madikeri 5

ಕೊಡಗು ಜಿಲ್ಲೆಯಲ್ಲಿ ಹೆಚ್ಚು ಕೃಷಿ ಮಾಡುವುದರಿಂದ ಕಾಫಿ ತೋಟ, ಭತ್ತದ ಗದ್ದೆಗಳು, ನದಿಗಳು, ಬೆಟ್ಟಗಳು ಹೆಚ್ಚಾಗಿವೆ. ವಾಹನಗಳ ಸಂಚಾರದ ಸಂಖ್ಯೆ ಕಡಿಮೆ ಇದೆ. ವಾಹನಗಳ ಹೊಗೆ ಇರುವುದಿಲ್ಲ. ಇನ್ನೂ ಕಾರ್ಖಾನೆಗಳು ಇಲ್ಲ. ಮಲೆನಾಡು ಪ್ರದೇಶವಾದರಿಂದ ಮಳೆಯ ಪ್ರಮಾಣ ಕೂಡ ಹೆಚ್ಚಾಗಿದೆ. ಇದರಿಂದ ವಾಯುಮಾಲಿನ್ಯ ಕಡಿಮೆ ಮಟ್ಟದಲ್ಲಿ ಆಗುತ್ತದೆ.

ಗಾಳಿಯೂ ಕೂಡ ಉತ್ತಮವಾಗಿದ್ದು, ಈ ರೀತಿಯ ಪ್ರಕೃತಿ ಸೌಂದರ್ಯವನ್ನು ನೋಡಲು ಪ್ರವಾಸಿಗರು ಬರುತ್ತಿರುತ್ತಾರೆ. ಕೊಡಗಿಗೆ ಉತ್ತಮ ವಾಯುಗುಣ ಹೊಂದಿದ್ದ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆ ಸ್ಥಳೀಯರು ಹರ್ಷವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಪ್ರವಾಸಿಗರ ಸ್ವರ್ಗ ಎಂದು ಕರೆಯುವ ಕೊಡಗಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *